ಉಚಿತ ಆರೋಗ್ಯ ತಪಾಸಣೆ 14ರಂದು

image description
image description
Published on

ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯ ರಾಮಮಂದಿರದ ಹತ್ತಿರದ ಹೊಸ ವೆಂಕಟಗಿರಿ ಹೊಟೇಲ್ ಬಳಿಯ ವಿಶ್ವಚೇತನ ಆಯುರ್ವೇದಿಕ ಚಿಕಿತ್ಸಾಲಯದಲ್ಲಿ ಆ.೧೪ರಂದು ಆಸ್ಪತ್ರೆಯ ನಾಲ್ಕನೇ ವರ್ಷ ವಾರ್ಷಿಕೋತ್ಸವ ನಿಮಿತ್ತ ನುರಿತ ವೈದ್ಯರಿಂದ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೨ರವರೆಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಡಾ.ಸತೀಶ ಪಾಟೀಲ್ ತಿಳಿಸಿದ್ದಾರೆ. ಮೂಲವ್ಯಾದಿ, ಪಿಸ್ತೂಲ, ಹರ್ನಿಯಾ ಸೇರಿ ವಿವಿಧ ರೋಗಗಳಿಗೆ ಉಚಿತ ತಪಾಸಣೆ ಮಾಡಿ, ಸೂಕ್ತ ಸಲಹೆ ನೀಡಲಾಗುವುದು. ಹೆಸರು ನೋಂದಾಯಿಸಲು ೭೮೯೯೦೫೫೫೯ ಸಂಪರ್ಕಿಸಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net