ಉಚಿತ ಆರೋಗ್ಯ ತಪಾಸಣಾ ತಪಾಸಣೆ

ಉಚಿತ ಆರೋಗ್ಯ ತಪಾಸಣಾ ತಪಾಸಣೆ
Published on

ಅರಸೀಕೆರೆ: ನಗರದ ಹುಳಿಯಾರು ರಸ್ತೆಗೆ ಹೊಂದಿಕೊಡಂತಿರುವ ಮದಿನಾ ಶಾದಿ ಮಹಲ್‌ನಲ್ಲಿ ಆರೋಗ್ಯ ಇಲಾಖೆ, ಸುಲ್ತಾನ್‌ನುಲ್ ಹಿಂದ್ ಶಿಕ್ಷಣ ಸಂಸ್ಥೆಮ ರೋಟರಿ ಕ್ಲಬ್ ಹಾಗೂ ವಾಸವಾಂಬ ನೇತ್ರಾಲಯದ ವತಿಯಿಂದ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣಾ ಆಯೋಜಿಸಿಲಾಗಿತ್ತು.

ಉದ್ಯಮಿ ಕೆ.ಪಿ.ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕಳೆದ 27 ವರ್ಷಗಳಿಂದ ಕಣ್ಣಿನ ತಪಾಸಣೆ ಜತೆಗೆ ಉಚಿತ ಆರೋಗ್ಯ ಶಿಬಿರವನ್ನು ನಿರಂತರವಾಗಿ ಆಯೋಜಿಸಿಕೊಂಡು ಬಂದಿದ್ದೇವೆ. ಅಂದಾಜು 15 ಸಾವಿರಕ್ಕೂ ಹೆಚ್ಚಿನ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದರ ಜತೆಗೆ ಕನ್ನಡಕ ವಿತರಿಸಲಾಗಿದೆ.ನಮ್ಮೊಂದಿಗೆ ಎಲ್ಲ ಸಂಘ ಸಂಸ್ಥೆಗಳು ಕೈಜಡಿಸುತ್ತಿರುವುದು ಸಂತಸ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ತಹಸೀಲ್ದಾರ್ ವಿಭಾ ವಿ ರಾಥೋಡ್ ಮಾತನಾಡಿ,ಸಂಘ,ಸಂಸ್ಥೆಗಳು ಆಯೋಜಿಸುವ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು, ಜಾಮಿಯಾ ಮಸೀದಿಯ ಧರ್ಮಗುರು ಮೌಲಾನ ಫೈಯುಮದ್ದೀನ್ ಖಾದ್ರಿ, ಜಮಾತ್ ಸಮಿತಿಯ ರಿಯಾಜ್ ಪಾಷಾ, ಸಯ್ಯದ್ ರಫೀಕ್, ಡಾ.ಸುರೇಶ್ ಸೇರಿ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net