ಉಗ್ರರನ್ನು ಸದೆಬಡಿಯಲು ಅಂಜುಮನ್ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಾಶ್ಮೀರದ ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆಬಡಿಯುವಂತೆ ಹಾಗೂ ದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವಂತೆ ಹುಬ್ಬಳ್ಳಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆ, ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಪಹಲ್ಗಾಮ್ ಘಟನೆ ಖಂಡಿಸಿ ಸಂಸ್ಥೆಯ ಪದಾಧಿಕಾರಿಗಳು ಇಲ್ಲಿಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಮಾತನಾಡಿ, ಇದು ಹೇಯ ಕೃತ್ಯ. ಉಗ್ರರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು. ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಕನ್ನಡಿಗರು ಸಹ ಸಾವನ್ನಪ್ಪಿರುವುದು ದುಃಖದ ಸಂಗತಿ ಎಂದು ಹೇಳಿದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಅಂಜುಮನ್ ಗೌರವ ಕಾರ್ಯದರ್ಶಿ ಬಶೀರ ಹಳ್ಳೂರ, ರಫೀಕ ಬಂಕಾಪೂರ, ಮೌಲಾನಾ ಜಹೀರುದ್ದಿನ ಖಾಜಿ, ಮೌಲಾನಾ ನಯೀಮುದ್ದಿನ ಅಶ್ರಫಿ, ಮುಖಂಡರಾದ ಇರ್ಷಾದ ಬಳ್ಳಾರಿ, ಆರೀಫ್ ಭದ್ರಾಪೂರ, ಇಲಿಯಾಸ ಮನಿಯಾರ, ಇಕ್ಬಾಲ್ ನವಲೂರ, ಇಮ್ರಾನ್ ಎಲಿಗಾರ, ನವೀದ್ ಮುಲ್ಲಾ, ಸಲೀಂ ಸುಂಡಕೆ, ಮಹಮೂದ್ ಕೊಳೂರ, ಅಬ್ದುಲ್ ಗನಿ ವಲೀಅಹ್ಮದ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net