ಉಗ್ರರ ದಾಳಿ ಹುತಾತ್ಮರಿಗೆ ಶ್ರದ್ಧಾಂಜಲಿ

MDG MERAVANIGE
Published on

ಮುಂಡರಗಿ: ಪಟ್ಟಣದ ನೂರಾನಿ ಮಸೀದಿ ಬಳಿಯ ಕೊಪ್ಪಳ ಸರ್ಕಲ್​ನಲ್ಲಿ ಪಹಲ್ಗಾಮ್ಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿ, ಉಗ್ರರ ದಾಳಿಯಿಂದ ಹುತಾತ್ಮರಾದವರಿಗೆ ಸ್ಥಳೀಯ ಮುಸ್ಲಿಂರು ಶನಿವಾರ ಸಂಜೆ ಮೇಣದ ದೀಪ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಅಂಜುಮನ್ ಇಸ್ಮಾಂ ಕಮಿಟಿ ಮಾಜಿ ಅಧ್ಯಕ್ಷ ನಬೀಸಾಬ್ ಕೆಲೂರು, ಎ.ಕೆ. ಮುಲ್ಲಾನವರ, ಅಮೀನಸಾಬ್ ಬಿಸನಳ್ಳಿ, ರಾಜಾಭಕ್ಷಿ ಬೆಟಗೇರಿ, ಎಂ.ಎಚ್. ತಳಗಡೆ, ಸಂತೋಷ ಹಿರೇಮನಿ ಮಾತನಾಡಿ, ಕೇಂದ್ರ ಸರ್ಕಾರವು ಉಗ್ರರನ್ನು ಪತ್ತೆ ಮಾಡಿ ತಕ್ಕ ಶಾಸ್ತಿಯನ್ನು ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎ.ಕೆ. ಕೊಕ್ಕರಗುಂದಿ, ಹಾಜಿ ಬಾಸುಸಾಬ್ ಮುಲ್ಲಾ, ಹಾಜಿ ಜಂದಿಸಾಬ್ ಬಿಸ್ತಿ, ಹಾಜಿ ಮಾಬುಸಾಬ್ ವಕಾರದ, ಹಾಜಿ ಎ.ಜಿ. ಅಂಗಡಿ, ಮೈನು ರಾಟಿ, ಶಿರಾಜ್ ಬೆಟಗೇರಿ, ಸದ್ದಾಮ್ ಬೇಸಗಾರ, ಇರ್ವನ್ ವಡ್ಡಟ್ಟಿ, ಜಾಫರ್ ಹುಬ್ಬಳ್ಳಿ, ನಾಸೀರ್ ಅಳವಂಡಿ, ಸುಭಾಸಸಾಬ್ ಜವಳಿ, ಇಸ್ಮಾಯಿಲ್ ಮುಲ್ಲಾ, ಇಮಾಮ್ಾಬ್ ತಳಗಡೆ, ಎಂ.ಕೆ. ತಳಗಡೆ, ಆಸಿಂ ಸರಗಿ, ಹಿಜಾಮುದ್ದಿನ್ ಮುಲ್ಲಾ, ಪೀರು ಸಂದಿಮನಿ, ಕರಿಂಸಾಬ್ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net