ಉಗ್ರರ ದಾಳಿ ಖಂಡಿಸಿ ರಾಜಸ್ತಾನ್ ಸಮಾಜ ಸಂಘಟನೆ ಪ್ರತಿಭಟನೆ

mysore
Published on

ಮೈಸೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಸಮಸ್ತ ರಾಜಸ್ತಾನ್ ಸಮಾಜ ಸಂಘಟನೆಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ನಗರದ ಗಾಂಧಿ ಚೌಕದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಉಗ್ರರ ದಾಳಿಯನ್ನು ಖಂಡಿಸಿದರು.

ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದ ಅಲ್ಲಿಂದ ವಾಹನ ಮೂಲಕ ಹೊಸ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು. ಪಹಲ್ಗಾಮ್‌ನ ರಮಣೀಯ ಸ್ಥಳದಲ್ಲಿ ಪ್ರವಾಸಿಗರನ್ನು ಭೀಕರವಾಗಿ ಕೊಂದಿರುವ ಘಟನೆ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆ. ಹೀಗಾಗಿ, ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಬೂದ್‌ಮಲ್, ತೇರಾ ಪಂಥ ಸಂಘದ ಪ್ರಕಾಶ್, ಸುಮತಿ ನಾಥ್ ಜೈನ್ ಯುವ ಸಂಘಟನೆ ಅಧ್ಯಕ್ಷ ಜಯಕುಮಾರ್, ಜೀತೋ ಅಧ್ಯಕ್ಷ ವಿನೋದ್ ಜೈನ್, ಬಿಜೆಎಸ್ ಅಧ್ಯಕ್ಷ ರಾಜನ್, ಶಾಂತಿಲಾಲ್ ಹರಣ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net