

ಕಲಬುರಗಿ: ಕಳೆದ ಮೂರು ರ‍್ಷದಿಂದ ಸೇನಾ ನೇಮಕ ಮಾಡಿಲ್ಲ. ೧.೦೯ ಲಕ್ಷ ಸೇನಾ ನೇಮಕ ಕಡಿಮೆ ಮಾಡಿದ್ದು, ಜನಸಂಖ್ಯೆ ಹೆಚ್ಚಳವಾಗಿದೆ. ಅದರ ತಕ್ಕಂತೆ ಸೇನಾ ಬಲವೂ ಹೆಚ್ಚಳವಾಗಬೇಕು. ಕಾಶ್ಮೀರದಲ್ಲಿ ದಾಳಿಗೆ, ಉಗ್ರರ ನುಸುಳಿವಿಕೆಗೆ ಸೈನಿಕರ ಸಂಖ್ಯೆ ಕಡಿಮೆ ಮಾಡಿದ್ದು ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಉಗ್ರ ದಾಳಿಯ ಹೊಣೆ ಕೇಂದ್ರ ರ‍್ಕಾರದ್ದಾಗಿದ್ದು, ಅಗ್ನೀವಿರ ಮೂರು ರ‍್ಷ ಸೇವೆ ಎಂದು ಮಾಡಲಾಗಿದೆ. ಅಗ್ನೀವಿರ ನೇಮಕ ಖಾಯಂ ಆಗಬೇಕು. ದಾಳಿಗಳು ಪುನರಾರ‍್ತನೆ ಆಗದಂತೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ರಣಾ ಸಚಿವ ರಾಜನಾಥ ಸಿಂಗ್ ಮುಂದಾಗಬೇಕು ಎಂದರು. ಉಗ್ರರು ನಮ್ಮ ವಿರೋಧಿಗಳು. ಇಲ್ಲಿಯವರೇ ಇರಲಿ ಅಥವಾ ಹೊರಗಿನವರೇ ಇರಲಿ. ಆದರೆ ಮಟ್ಟ ಹಾಕುವ ಕೆಲಸ ತರ‍್ತಾಗಿ ಆಗಬೇಕು. ಈ ಹಿಂದೆ ಇಂದಿರಾಗಾಂಧಿ ಏನ್ ಮಾಡಿದ್ದರು ಎಂಬುದನ್ನು ಅರಿತು ದೃಢ ಹೆಜ್ಜೆ ಇಡಬೇಕು. ಇದರಲ್ಲಿ ಇಲ್ಲದ್ದನ್ನು ಹುಡುಕಾಡಬಾರದು ಎಂದರು.