

ಉಜ್ಜಿನಿ: ನಿರಂತರ ಮಳೆಯಿಂದ ನಿಂಬಳಗೆರೆ ಗ್ರಾಮದಲ್ಲಿ ಕೆಲ ರೈತರ ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಮಳೆ ಇಲ್ಲದ್ದರಿಂದ ಕೊಳವೆಬಾವಿಗಳಲ್ಲಿ ನೀರು ಇರಲಿಲ್ಲ. ಇದರಿಂದಾಗಿ ಕೊಳವೆಬಾವಿಗಳು ಮುಚ್ಚುವ ಹಂತಕ್ಕೆ ತಲುಪಿದ್ದವು. ಪ್ರಸಕ್ತ ವರ್ಷ ನಿರಂತರ ಮಳೆಯಾಗುತ್ತಿದ್ದು, ಅಂತರ್ಜಲ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮದ ಜಂತಕಲ್ಲು ಕರಿಬಸಪ್ಪ, ಎಚ್.ಕೆ.ಕಲ್ಲೇಶ, ಸತ್ಯಮ್ಮ, ಎಚ್.ಎಂ.ಸರಸ್ವತಿ, ತಳವಾರ ದೇವೇಂದ್ರ ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆಬಾವಿಯಲ್ಲಿ ನೀರು ಉಕ್ಕುತ್ತಿದ್ದು ಜನರು ಸಂತಸಗೊಂಡಿದ್ದಾರೆ. ನಿರಂತರ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆ-ಕಟ್ಟೆಗಳು ಕೂಡ ಭರ್ತಿಯಾಗಿವೆ.