ಉಕ್ಕಲಗೆರೆ ಗ್ರಾಪಂಗೆ ಲತಾ ಅಧ್ಯಕ್ಷೆ

10tnp.01
Published on

ತಿ.ನರಸೀಪುರ: ಉಕ್ಕಲಗೆರೆ ಗ್ರಾಮಪಂಚಾಯ್ತಿ ಆಡಳಿತ ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಅಧ್ಯಕ್ಷೆಯಾಗಿ ಲತಾ, ಉಪಾಧ್ಯಕ್ಷೆಯಾಗಿ ಶಿವಮ್ಮ ಆಯ್ಕೆಯಾದರು.


ಉಕ್ಕಲಗೆರೆ ಗ್ರಾ.ಪಂ.ನ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವನಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲತಾ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಮ್ಮ, ಶಿವಮ್ಮ ನಾಮಪತ್ರ ಸಲ್ಲಿಸಿದ್ದರು.


ನಂತರ ನಡೆದ ಚುನಾವಣೆಯಲ್ಲಿ ಲತಾ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಸಿದ್ದರಾಜು 6 ಮತ ಪಡೆದು ಪರಾಭವಗೊಂಡರು. ಶಿವಮ್ಮ 8 ಮತಗಳನ್ನು ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. 6 ಮತಗಳನ್ನು ಪಡೆದ ಪುಟ್ಟಮ್ಮ ಸೋಲು ಅನುಭವಿಸಿದರು.


ಚುನಾವಣಾಧಿಕಾರಿ ಆಗಿ ಸಿಡಿಪಿಒ ಗೋವಿಂದೇಗೌಡ, ಸಹಾಯಕ ಚುನಾವಣಾಧಿಕಾರಿ ಆಗಿ ಭವ್ಯಶ್ರೀ ಕಾರ್ಯ ನಿರ್ವಹಿಸಿದರು. ಸದಸ್ಯರಾದ ಎಂ.ಕುಮಾರ, ಆರ್.ರವಿಶಂಕರ್, ಮಲ್ಲೇಶಪ್ಪ, ನಾಗಲಾಂಬಿಕ, ಶಿವಪ್ರಸಾದ್, ಮಹದೇವಮ್ಮ, ರಾಜಮ್ಮ, ಮಹದೇವ, ಆರ್.ಸಿದ್ದರಾಜು, ಮಂಜುಳಾ, ಎಂ.ನಿಂಗರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಅಭಿನಂದಿಸಿದರು. ಸೋಮನಾಥಪುರ ಪಿಎಸಿಸಿ ಅಧ್ಯಕ್ಷ ಷಡಕ್ಷರಿ, ಗ್ರಾಪಂ ಮಾಜಿ ಅಧ್ಯಕ್ಷ ನಾಗಣ್ಣ, ಮಾಜಿ ಉಪಾಧ್ಯಕ್ಷ ಸಿ.ನಂಜುಂಡಯ್ಯ, ಗ್ರಾ.ಪಂ. ಮಾಜಿ ಸದಸ್ಯ ರಾಜು, ಅಡುಗೆ ನಾಗರಾಜು, ಮುಖಂಡರಾದ ಕಗ್ಗಲೀಪುರ ವಜ್ರೇಗೌಡ, ಮಲ್ಲಿಕಾ, ರಂಗಸ್ವಾಮಿ, ನಾಗೇಂದ್ರ, ಶ್ರೀಕಂಠ ಸ್ವಾಮಿ, ಅಂಗಡಿ ಶಿವಕುಮಾರ್, ಪ್ರಕಾಶ್, ಮಹದೇವಸ್ವಾಮಿ, ಎಂ.ಎಲ್.ಹುಂಡಿ ಪ್ರಭುಸ್ವಾಮಿ, ದೇವರಾಜು, ಸಂಪತ್ ಕುಮಾರ್, ಪಿಡಿಒ ಕೃಷ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net