ಉ-ಕದವರೇ ನೀರಾವರಿ ಮಂತ್ರಿಯಾಗಬೇಕು

bkt-7-1
ಬಾಗಲಕೋಟೆ ನಗರದ ಡಿಸಿ ಕಚೇರಿ ಎದುರು ಶನಿವಾರ ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಶಾಸಕ, ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
Published on

ಬಾಗಲಕೋಟೆ: ನನಗೂ ಡಿ.ಕೆ.ಶಿವಕುಮಾರಗೂ ನಡ್ಯಾಂಗಿಲ್ಲ. ಸದನದಲ್ಲಿ ನಾನು ನೀರಾವರಿ ಮಂತ್ರಿ ಅಂತ ಕರಿತೀನಿ. ಅವರು ಮಾನ್ಯ ಶಾಸಕರು ಅಂತಾರ. ಆ ಭಾಗದವರು ನಮ್ಮ ನಾಡಿನ ಬಗ್ಗೆ ಕಾಳಜಿ ಇರಲ್ಲ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಕೃಷ್ಣಾ ಸಂತ್ರಸ್ತರ ಹೋರಾಟಕ್ಕೆ ಶನಿವಾರ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ನೀರಾವರಿ ಕೆಲಸ ಮುಗಿದಿವೆ. ಉತ್ತರ ಕರ್ನಾಟಕದಲ್ಲಿ ಬಹುದೊಡ್ಡ ಯೋಜನೆಗಳು ಬಾಕಿ ಉಳಿದಿವೆ. ಹೀಗಾಗಿ ಉತ್ತರ ಕರ್ನಾಟಕದವರು ನೀರಾವರಿ ಮಂತ್ರಿಯಾಗಬೇಕು. ನಮ್ಮ ಭಾಗದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ ನೀರಾವರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಬಣ್ಣಿಸಿದರು.

ಕೃಷ್ಣೆಗಾಗಿ ಪಾದಯಾತ್ರೆ ಮಾಡಿ ಆಣೆ ಪ್ರಮಾಣ ಮಾಡಿ ೧೦ ಸಾವಿರ ಕೋಟಿ ರೂ. ಕೊಡುತ್ತೇನೆ ಅಂದರು. ಕೊಡಲಿಲ್ಲ. ಬೆಳಗಾವಿ ಅಽವೇಶನಕ್ಕೆ ಬಂದರೇ ಪಿಕಿನಿಕ್ ಬರುತ್ತಾರೆ. ಗೋವಾ, ಕೊಲ್ಲಾಪುರ ಮಹಾಲಕ್ಷಿ÷್ಮÃ ಹೋಗುತ್ತಾರೆ. ದಕ್ಷಿಣ ಕರ್ನಾಟಕದವರು ಒಂದು ದಿನವು ಈ ಬಗ್ಗೆ ಚರ್ಚೆ ಮಾಡಲ್ಲ. ಕೊನೆಗೆ ಚರ್ಚೆ ಇಟ್ಟುಕೊಳ್ಳುತ್ತಾರೆ. ಅಲ್ಲಿಗೆ ಎಲ್ಲವು ಮುಗಿದು ಹೋಗಿರುತ್ತದೆ. ಹೀಗಾಗಿ ಸಿಎಂಗೆ ಪತ್ರ ಬರೆದಿದ್ದೇನೆ. ಮೊದಲ ದಿನವೇ ಕೃಷ್ಣಾ ಯೋಜನೆ ಚರ್ಚೆಗೆ ತೆಗೆದುಕೊಳ್ಳಲು ಮನವಿ ಮಾಡಿದ್ದೇನೆ. ಬೆಂಗಳೂರಿನ ಮಹಾನಗರ ಪಾಲಿಕೆಗೆ ೧೦ ಸಾವಿರ ಕೋಟಿ ರೂ. ಅನುದಾನ ಕೊಡುತ್ತಾರೆ. ನಮಗೆ ಕೊಡುವದಿಲ್ಲ ಅಂತ ಪ್ರಶ್ನಿ ಮಾಡೋನ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net