ಉ-ಕ ಶಾಸಕರ ಸಭೆ ನಡೆಸಲು ನಿರ್ಧಾರ

bkt-6-4 (2)
ಬಾಗಲಕೋಟೆ ನಗರದ ಯುಕೆಪಿ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭ.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನಾ ಬಾಽತ ಸಂತ್ರಸ್ತರ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯವಾಗಿ ಬೇಕಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಲು ಈಗಾಗಲೇ ಬಾಗಲಕೋಟೆ ಉಸ್ತುವಾರಿ ಸಚಿವರು ಸೇರಿದಂತೆ ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಅನೇಕ ಶಾಸಕರನ್ನು ಸಂಪರ್ಕ ಮಾಡಿದ್ದು, ಸದನದಲ್ಲಿ ಧ್ವನಿ ಎತ್ತಲು ಪೂರ್ವ ಭಾವಿಯಾಗಿ ಡಿ.೯ ಅಥವಾ ೧೦ ರಂದು ಸಭೆ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೋರಾಟ ಸಮಿತಿ ಗೌರವ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಹೇಳಿದರು.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿಯೂ ಸಹ ಬೆಳಗಾವಿಗೆ ಹೋಗಿ ಒಂದು ಪತ್ರ ನೀಡಿ ಸಭೆ ನಿಗಽ ಪಡಿಸಲು ಮನವಿ ಮಾಡುತ್ತೇವೆ. ಕೆಲ ಶಾಸಕರು ಸಭೆಯನ್ನು ಯಾವುದೇ ಖಾಸಗಿ ಜಾಗೆಯಲ್ಲಿ ಬೇಡ. ಸುವರ್ಣ ಸೌಧದ ಸಭಾಭವನದಲ್ಲಿ ಸಭೆ ನಡೆಸಲು ಸಲಹೆ ನೀಡಿದ್ದಾರೆ. ಈ ಸಾರಿ ಅಧಿವೇಶನದ ಆರಂಭದಲ್ಲಿ ಕೃಷ್ಣಾ ಯೋಜನೆ ಬಗ್ಗೆ ಚರ್ಚೆಗೆ ಶಾಸಕರು ಸಿದ್ದರಿದ್ದಾರೆ. ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗದಿದ್ದರೇ ಈ ಹಿಂದೆ ದಿ.ಉಮೇಶ ಕತ್ತಿ ಅವರು ಹೇಳಿದಂತೆ ಪ್ರತ್ಯೇಕ ರಾಜ್ಯಕ್ಕೂ ನಮ್ಮ ಬೆಂಬಲವಿದೆ. ಅನ್ಯಾಯ ಇನ್ನು ಮುಂದುವರೆದರೇ ನಾವು ಪ್ರತ್ಯೇಕ ರಾಜ್ಯ ಕೇಳಲೇ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net