

ಬಾಗಲಕೋಟೆ: ಲೋಕಾಪುರ-ಧಾರವಾಡ-ಯಲ್ಲಮ್ಮ ಹಾಗೂ ಬಾಗಲಕೋಟೆ ಕುಡಚಿ ಮಾರ್ಗ ರೈಲು ಮಾರ್ಗ ಸೇರಿದಂತೆ ಉತ್ತರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಭರವಸೆ ನೀಡಿದ್ದಾರೆ.
ಬೆಳಗಾವಿಯ ತಮ್ಮ ಕಚೇರಿಯಲ್ಲಿ ಮಂಗಳವಾರ ಲೋಕಾಪುರ-ರಾಮದುರ್ಗ-ಸೌದತ್ತಿ ರೈಲ್ವೆ ಹೋರಾಟಗಾರ ಸಭೆ ಕರೆದು ಚರ್ಚಿಸಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ರೈಲುಗಳ ಸಂಚಾರ, ರೈಲು ಹಳಿಗಳ ನಿರ್ಮಾಣ ಸೇರಿದಂತೆ ರೈಲು ಸೌಕರ್ಯಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದರು.
ಹೋರಾಟಗಾರ ಕುತುಬುದ್ಧೀನ್ ಖಾಜಿ ಮಾತನಾಡಿ, ಲೋಕಾಪುರ ಧಾರವಾಡ ರೈಲು ಮಾರ್ಗ ಅನುಷ್ಠಾಕ್ಕೆ ಸರ್ಕಾರ ಅಗತ್ಯ ಸಮೀಕ್ಷೆಗಳು ಯೂಜನೆಗಳು ಪರವಾಗಿ ಇದ್ದು, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಇದರಿಂದ ಯಲ್ಲಮ್ಮನ ಭಕ್ತರು ಸೇರಿದಂತೆ ಶಿರಸಂಗಿ -ಕಾಳಮ್ಮ -ಗೊಡಚಿ ವೀರಭದ್ರೇಶ್ವರ ದೇವರಿಗೆ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟç, ತಮಿಳುನಾಡಿನ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಬೆಳಗಾವಿ-ಬಾಗಲಕೋಟೆ-ವಿಜಯಪುರ ಜಿ¯್ಲೆಯ ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ ಧಾರವಾಡಕ್ಕೆ ಹೋಗಲು ವ್ಯಾಪಾರಸ್ಥರಿಗೆ ಹುಬ್ಬಳ್ಳಿ ತಲುಪಲು ಅನುಕೂಲ ಆಗುತ್ತೆ ಎಂದು ಆಗ್ರಹಿಸಿದರು.
ಅದರಂತೆ ಕುಡಚಿ ಮಾರ್ಗ ಪೂರ್ಣ ಶೀಘ್ರಗೊಳಿಸಲು ಪ್ರಯತ್ನ ಮಾಡಬೇಕು. ಆಲಮಟ್ಟಿ, ಯಾದಗೇರಿ, ಗದಗ ಯಲ್ಲವಗಿ, ಗದಗ ವಾಡಿ, ಹುಬ್ಬಳ್ಳಿ ಅಂಕೋಲಾ, ಆಲಮಟ್ಟಿ, ಚಿತ್ರದುರ್ಗ ರೈಲು ಮಾರ್ಗಗಳು ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಜಿ.ಎಂ.ಜೈನೆಖಾನ, ಶೆಶಿಕಾಂತ ನೆಲ್ಲೂರ, ಎಸ್.ಜಿ.ಚಿಕ್ಕನರಗುಂದ, ಮೊಹಮ್ಮದ ಶೇಫಿ, ಡಿ.ಎ-ï.ಬೆಣ್ಣಿ ಹಾಜಿ, ದಾದಾಪೀರ ಕೆರೂರ ಇತರರು ಇದ್ದರು.