ಈಶ್ವರೀಯ ವಿವಿಯಲ್ಲಿ ಗೀತಾ ಜಯಂತಿ ಸಂಭ್ರಮ

BDVT WEB
Published on

ಭದ್ರಾವತಿ: ನ್ಯೂಟೌನ್‌ನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು. ಬಿ.ಕೆ.ಮಾಲಕ್ಕ ನೇತೃತ್ವದಲ್ಲಿ ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೀತಾ ಜಯಂತಿಯ ಮಹತ್ವ ವಿವರಿಸಲಾಯಿತು. ನಂತರ ಕೇಕ್ ಕತ್ತರಿಸಿ, ಸಿಹಿ ಹಂಚಲಾಯಿತು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕೇಂದ್ರ ಮೀಸಲು ಪೊಲೀಸ್ ಪಡೆ, ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) 97 ಬೆಟಾಲಿಯನ್ ಡೆಪ್ಯೂಟಿ ಕಮಾಂಡೆಂಟ್‌ಗಳಾದ ಬಿ.ಸಿ.ರಾಯ್, ನಯನ್ ನಂದಿ ಮತ್ತು ಸಂತೋಷ್, ಗೃಹ ರಕ್ಷಕದಳ ಘಟಕಾಧಿಕಾರಿ ಜಗದೀಶ್, ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಜಿ.ಎಂ.ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net