ಈಶ್ವರಾನಂದ ಸ್ವಾಮಿಗಳು ಲಿಂಗಕ್ಯ

IMG-20240304-WA0139
Published on

ಬೆಟಗೇರಿ: ಕೋಟುಮಚಗಿ ರಸ್ತೆ ಮದ್ಯದಲ್ಲಿ ಇರುವ ಬಸವಣ್ಣ ದೇವರ ಗುಡಿ ಹತ್ತಿರ ಇರುವ ಶ್ರೀ ಸಿದ್ದಾರೂಢ ಮಠದ  ಸ್ವಾಮಿಗಳಾದ  ಶ್ರೀ ಗುರು ಈಶ್ವರಾನಂದ ಸ್ವಾಮಿಗಳು ನಿನ್ನೆ ಲಿಂಗಕ್ಯರಾದರು. 

ಬೆಟಗೇರಿ, ಕೋಟುಮಚಗಿ ಕೇಟಗೇರಿ ಹಲವಾರು ಗ್ರಾಮಗಳಲ್ಲಿ ಭಕ್ತರನ್ನು ಹೊಂದಿದ್ದ ಶ್ರೀಗಳು ಭಕ್ತರಿಗೆ ಪ್ರತಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರವಚನ ಪ್ರಸಾದ ವಿತರಣೆ ಹಾಗೂ ಹಲವಾರು ಪೂಜೆಗಳ ಜೊತೆಗೆ ಭಕ್ತರಿಗೆ ಕಣ್ಣಿನ ದೃಷ್ಟಿ ದೋಷ ಪರಿಹಾರಕ್ಕೆ ಔಷದ ನೀಡುತ್ತಿದ್ದರು ಹಲವಾರು ಭಕ್ತರು ಈ ಔಷಧದಿಂದ ಪರಿಹಾರ ಕೊಂಡುಕೊಂಡಿದ್ದರು. ಹೀಗಾಗಿ ಹಲವಾರು ಸಂದರ್ಭಗಳಲ್ಲಿ ಅಶೋತ್ತರಗಳಿಗೆ ಅನುಗುಣವಾಗಿ ಪರಿಹಾರ ಸೂಚಿಸುತ್ತಿದ್ದರು ತೀರಾ ಇತ್ತೀಚೆಗೆ ಮೆದುಳಿನ ತೊಂದರೆಯಿಂದಾಗಿ ಹುಬ್ಬಳ್ಳಿಯ ದವಾಖಾನೆಗೆ ಶಾಸ್ತ್ರ ಜಿಕಿಸಿಗಾಗಿ ಶಾಸ್ತ್ರ ಚಿಕಿತ್ಸೆಗಾಗಿ ಭಕ್ತರು ಅಡ್ಮಿಟ್ ಆಗಿದ್ದರು ಮಾಡಿದರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಲಿಂಗೈಕೆರಾದರೂ ಸೋಮವಾರ ಸಂಜೆ ಆರು ಗಂಟೆಗೆ ರಾಣೆಬೆನ್ನೂರು ಹತ್ತಿರದ ಅಂಕಸಪುರ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು

ಮಠದ  ಭಕ್ತರಾದ ರಾಮಕೃಷ್ಣ ಪಾಂಡ್ರೆ, ಮೈಲಾರಪ್ಪ ಶೆಡ್ಡಿ  ಶ್ರೀನಿವಾಸ ಹುಯಿಲಗೋಳ ಚಿಕ್ಕಟ್ಟಿ ಶಾಲೆ ಅಧ್ಯಕ್ಷರು ಶ್ರೀನಿವಾಸ ಹುಬ್ಬಳ್ಳಿ ಮಲ್ಲಿಕಾರ್ಜುನ ಬೆಟದೂರ ಹಿರೇಮಠ ಮಹೇಶ ಪಾಟೀಲ ಶಿವಕುಮಾರ್ ಪಾಟೀಲ ಕಲ್ಲೇಶ್ವರಯ್ಯ ಹಿರೆಮಠ  ಮುಂತಾದವರು ವಿಷಾದ ವ್ಯಕ್ತಪಡಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net