ಈಶ್ವರ ಸನ್ನಿಧಾನದಲ್ಲಿ ರುದ್ರಾಭಿಷೇಕ ಸಂಪನ್ನ

Shiva
Published on

ಚಿತ್ರದುರ್ಗ: ಐಯ್ಯಣ್ಣನ ಪೇಟೆಯ ಈಶ್ವರ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಸ್ವಾಮಿಗೆ ಮಹಾ ರುದ್ರಾಭೀಷೇಕ ಪೂಜಾ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು.

ರುದ್ರಾಭಿಷೇಕ, ಗಂಗಾಪೂಜೆಗೆ ಕುಂಭದೊಂದಿಗೆ ಆಗಮಿಸಿದ ಮಹಿಳೆಯರು ಪೂಜಾ ಕಾರ್ಯಕ್ಕೆ ನೆರವಾದರು. ಇದೇ ವೇಳೆ ಅನೇಕ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಸೋಮವಾರ ರಾತ್ರಿ 8ಕ್ಕೆ ಸ್ವಾಮಿಯ ಕಡೇ ಕಾರ್ತಿಕೋತ್ಸವ ಜರುಗಿತು. ಸ್ವಾಮಿಯ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net