ಈಶ್ವರ ದೇವಾಲಯಗಳಲ್ಲಿ ಶಿವ ಸ್ಮರಣೆಯ ಮಹಾಶಿವರಾತ್ರಿ

ಈಶ್ವರ ದೇವಾಲಯಗಳಲ್ಲಿ ಶಿವ ಸ್ಮರಣೆಯ ಮಹಾಶಿವರಾತ್ರಿ
Published on

ಆಲೂರು: ಶಿವ ಸ್ಮರಣೆಯ ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಈಶ್ವರ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. 

ಭಕ್ತರು ಶನಿವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. ಓಂ ನಮಃ ಶಿವಾಯ ಎಲ್ಲಾ ದೇಗುಲಗಳಲ್ಲಿಯು ಅನುರಣಿಸುತ್ತಿತ್ತು.

ಪಟ್ಟಣದ ಕೆಇಬಿ ಸರ್ಕಲ್ ನಲ್ಲಿರುವ ಸಂಗಮೇಶ್ವರ ಸ್ವಾಮಿ ದೇವಸ್ಥಾನ, ಯಡೂರು ಗ್ರಾಮದಲ್ಲಿರುವ ಈಶ್ವರ ಸ್ವಾಮಿ ದೇವಸ್ಥಾನ, ಹಳೆಆಲೂರು ಗ್ರಾಮದಲ್ಲಿರುವ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮರಸು ಗ್ರಾಮದಲ್ಲಿರುವ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಜೆ. ತಿಮ್ಮನಹಳ್ಳಿ ಗ್ರಾಮದಲ್ಲಿರುವ ಭೈರವೇಶ್ವರ ಸ್ವಾಮಿ ದೇವಸ್ಥಾನ, ಕಿರಗಡಲು ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನ  ಸೇರಿದಂತೆ ತಾಲೂಕಿನ  ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿದವು ‌ 

ಆಲೂರು ಪಟ್ಟಣದ ಕೆಇಬಿ ಸರ್ಕಲ್ ನಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿರುಪಾಪುರ ಗ್ರಾಮದ ಶಶಿ ಪುರೋಹಿತರಿಂದ ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ದೇಗುಲಗಳಲ್ಲಿರುವ ಎಲ್ಲಾ ದೇವರುಗಳ ಮೂರ್ತಿಗಳಿಗೆ ವಿಶೇಷ ಹೂವಿನ ಅಭಿಷೇಕ, ದೇವತಾ ಮಹಾ ಪೂಜೆ, ಮಹಾ ಮಂಗಳಾರತಿ ಮುಂತಾದ ಪೂಜಾ ವಿದಿ ವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜ್, ಮುಖಂಡರಾದ ಪ್ರಸನ್ನ ಕುಮಾರ್, ಯೋಗೇಶ್ ಸೇರಿದಂತೆ ದೇಗುಲಗಳ ಅರ್ಚಕರುಗಳು ಹಾಗೂ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net