ಈಶಾನ್ಯ ಸಾರಿಗೆಗೆ ನಿತ್ಯ ರು. 1.50 ಕೋಟಿ ಹಾನಿ

karona -5
Published on

ಕಲಬುರಗಿ: ಕರೊನಾ ಕಾರ್ಮೊಡದಿಂದಾಗಿ ಮಹಾರಾಷ್ಟ್ರ ಸೇರಿ ಅನೇಕ ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯು ನಿತ್ಯ 1.50 ಕೋಟಿ ರೂ. ಹಾನಿ ಎದುರಿಸುತ್ತಿದೆ.
ಸಂಸ್ಥೆ ವ್ಯಾಪ್ತಿಯಲ್ಲಿ 4255 ಬಸ್ಗಳಿದ್ದು, ಈ ಪೈಕಿ 1074 ಸಂಪೂರ್ಣ ಸ್ಥಗಿತ, 600 ಬಸ್ ಸೇವೆ ಭಾಗಶಃ ಸ್ಥಗಿತಗೊಳಿಸಲಾಗಿದೆ. ಬೇಡಿಕೆ ಆಧರಿಸಿ ಓಡಿಸಲು ಸಂಸ್ಥೆ ನಿರ್ಧರಿಸಿದೆ. ತೆಲಂಗಾಣ/ಆಂಧ್ರಪ್ರದೇಶಕ್ಕೆ 240 ಬಸ್ ಸಂಚರಿಸುತ್ತಿದ್ದವು. ಇದೀಗ 50-60 ಬಸ್ ಸೇವೆ ರದ್ದುಗೊಳಿಸಲಾಗಿದೆ. ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ ಎಲ್ಲ 421 ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿ ಆದೇಶದಂತೆ ಆ ಜಿಲ್ಲೆಗೆ ಸಂಚರಿಸುತ್ತಿದ್ದ 53 ಬಸ್ ಕಾಯರ್ಾಚರಣೆ ನಿಲ್ಲಿಸಿವೆ.
ಶ್ರೀಶೈಲಕ್ಕೆ ಬುಧವಾರ 18 ಮತ್ತು ಗುರುವಾರ 12 ಬಸ್ ಸಂಚಾರ ಸ್ಥಗಿತಗೊಳಿಸಿದ್ದು, 5 ಕೋಟಿ ರೂ. ಹಾನಿಯಾಗಿದೆ. ಬೆಂಗಳೂರು, ಬಳ್ಳಾರಿ, ಮಹಾರಾಷ್ಟ್ರಕ್ಕೆ ಬಹುತೇಕ ಎಲ್ಲ ಬಸ್ ಸಂಚಾರ ನಿಲ್ಲಿಸಿದ್ದು, ತೆಲಂಗಾಣಕ್ಕೆ ಶೇ.25ಕ್ಕೂ ಹೆಚ್ಚು ಬಸ್ ಸೇವೆ ರದ್ದುಗೊಳಿಸಲಾಗಿದೆ.

ನಿಷೇಧ ಮಧ್ಯೆಯೂ ಖಾಸಗಿ ಬಸ್ ಸಂಚಾರ
ಕರೊನಾ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸೇವೆ ರದ್ದುಗೊಳಿಸಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದರೂ ಕೆಲ ಖಾಸಗಿ ಬಸ್ ಸಂಚರಿಸುತ್ತಿರುವುದು ಕಂಡುಬಂದಿದೆ. ಖಾಸಗಿ ಸಂಸ್ಥೆಯೊಂದು ಬೆಂಗಳೂರು-ಕಲಬುರಗಿಗೆ ಒಂದು ಸೀಟಿಗೆ 9950 ರೂ. ಬುಕ್ ಮಾಡಿದ್ದು ಬೆಳಕಿಗೆ ಬಂದಿದೆ. ವ್ಯವಸ್ಥಾಪಕ ನಿದರ್ೇಶಕಿ ಜಹೀರಾ ನಸೀಮ್ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಈಶಾನ್ಯ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳಲ್ಲಿ ಬಹುತೇಕ ಬಸ್ ಸೇವೆ ಸ್ಥಗಿತಗೊಳಿಸಿದ್ದು, ಬೇಡಿಕೆ ಆಧರಿಸಿ ಸೇವೆ ಒದಗಿಸಲಾಗುತ್ತಿದೆ.

ಬೆದರಿದ ಜನ
ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮೂರು ದಿನ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಜತೆಗೆ 22ರಂದು ದೇಶವ್ಯಾಪಿ ಜನತಾ ಕಫ್ಯರ್ೂ ಘೋಷಿಸಲಾಗಿದೆ. ಇದೆಲ್ಲ ಗಮನಿಸುತ್ತಿರುವ ಸಾರ್ವಜನಿಕರು ಬೆದರಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಮೂರು ಪಾಸಿಟಿವ್ ವರದಿ ಬಂದಿದ್ದು, ಈ ಪೈಕಿ ವೃದ್ಧ ಮೃತಪಟ್ಟಿದ್ದಾನೆ. ಇಬ್ಬರು ಇಎಸ್ಐಸಿ ಐಸೋಲೇಶನ್ ವಾಡರ್್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 640ಕ್ಕೂ ಹೆಚ್ಚು ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.


ಸಾರ್ವಜನಿಕರು ತೀರ ಅಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಮಾಡಬೇಕು. ಜನರ ಆರೋಗ್ಯ ದೃಷ್ಟಿಯಿಂದ, ಕರೊನಾ ಹರಡದಂತೆ ಜಿಲ್ಲಾಧಿಕಾರಿ ಆದೇಶದಂತೆ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಆದಷ್ಟು ಮನೆಯಿಂದ ಹೊರಬರದೆ ಜಿಲ್ಲಾಡಳಿತಕ್ಕೆ ಕೈಜೋಡಿಸಬೇಕು.
| ಜಹೀರಾ ನಸೀಮ್
ವ್ಯವಸ್ಥಾಪಕ ನಿದರ್ೇಶಕಿ, ಎನ್ಈಕೆಆರ್ಟಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net