ಈರುಳ್ಳಿ ರಫ್ತು ತೆರಿಗೆ ರದ್ದುಗೊಳಿಸಿ

download (1)--02
Published on


ಚಿತ್ರದುರ್ಗ: ಈರುಳ್ಳಿ ಮೇಲಿನ ರಫ್ತು ತೆರಿಗೆ ಶೇ.40ನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಬುಧವಾರ ಪ್ರಧಾನಿ ಕಾರ‌್ಯಾಲಯಕ್ಕೆ ಪತ್ರ ಬರೆದಿರುವ ಸಂಘ,ವಾಣಿಜ್ಯಬೆಳೆ ಈರುಳ್ಳಿ ಬೆಳೆ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಹಾಳಾಗಿ ಜಿಲ್ಲೆಯ ಬೆಳೆಗಾರರು ಸತತ ಅನುಭವಿಸಿದ್ದಾರೆ.
ಈ ವರ್ಷ ಮುಂಗಾರು ವಿಳಂಬದಿಂದಾಗಿ ಅರೆ ಮನಸಿನಿಂದ ರೈತರು ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಈರುಳ್ಳಿ ದರ ಏರಿಕೆ ನಿರೀಕ್ಷೆಯ ಲ್ಲಿ ಒಂದಿಷ್ಟು ಸಾಲಗಳು ತೀರಲಿವೆ ಎಂಬ ಲೆಕ್ಕಾಚಾರದಲ್ಲೂ ಬೆಳೆಗಾರರು ಇದ್ದರು. ಆದರೆ ಆಗಸ್ಟ್,ಸೆಪ್ಟೆಂಬರ್‌ನಲ್ಲಿ ಈರುಳ್ಳಿ ದರ ಕೆಜಿಗೆ 40-60 ರೂ.ಗೆ ಏರಲಿದೆ ಎಂಬ ವರದಿಗಳಿಂದಾಗಿ ಕೇಂದ್ರ ಈರುಳ್ಳಿ ರಫ್ತಿನ ಮೇಲೆ ಶೇ.40 ತೆರಿಗೆ ವಿಧಿಸಿದ್ದರಿಂದಾಗಿ ದರ 30-20ರೂ.ಗೆ ಕುಸಿದಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.
ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ರಫ್ತು ತೆರಿಗೆ ರದ್ದು ಮಾಡ ಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್,ನಿಜ ಲಿಂಗಪ್ಪ,ಕೆ.ಸುರೇಶ್‌ಬಾಬು,ಎಸ್.ಕೆ.ತಿಪ್ಪೇಸ್ವಾಮಿ,ಎಂ.ಚಂದ್ರಶೇಖರ್,ಆರ್.ಸುರೇಶ್,ಜೆ.ಕೃಷ್ಣಮೂರ್ತಿ,ಆರ್.ಕೃಷ್ಣಮೂರ್ತಿ,ಜಿ.ಎಸ್. ಶಿವಮೂರ್ತಿ,ಮಹಾಂತೇಶ್‌ರೆಡ್ಡಿ ಮತ್ತಿತರ ಸಂಘದ ಪದಾಧಿಕಾರಿ,ಸದಸ್ಯರು ಪ್ರಧಾನಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net