ಈರುಳ್ಳಿ ನುಸಿ ಹತೋಟಿಗೆ ಪ್ರಾತ್ಯಕ್ಷಿಕೆ

3 ckm 3 web
Published on

ಚಿಕ್ಕಮಗಳೂರು: ಈರುಳ್ಳಿ ಬೆಳೆಯಲ್ಲಿ ಪ್ರಮುಖವಾಗಿ ಕಂಡುಬರುವ ರಸ ಹೀರುವ ಕೀಟವಾದ ಥ್ರಿಪ್ಸ್ ನುಸಿಯನ್ನು ಸಮಗ್ರವಾಗಿ ಹತೋಟಿ ಮಾಡಬೇಕು ಎಂದು ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಆರ್.ಗಿರೀಶ್ ಹೇಳಿದರು.

ಮೂಡಿಗೆರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ಜೋಡಿಲಿಂಗದಹಳ್ಳಿಯಲ್ಲಿ ಈರುಳ್ಳಿ ಬೆಳೆಯಲ್ಲಿ ರಸ ಹೀರುವ ಥ್ರಿಪ್ಸ್ ನುಸಿ ಹತೋಟಿ ಹಾಗೂ ಲಘು ಪೋಷಕಾಂಶಗಳ ನಿರ್ವಹಣೆ ಕುರಿತು ಮುಂಚೂಣಿ ಕ್ಷೇತ್ರ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

ನುಸಿಗಳನ್ನು ಜೈವಿಕವಾಗಿ ಹತೋಟಿ ಮಾಡಲು ಲೆಕನಿಸಿಲೀಯಮ್ ಲೀಕನಿ ಎಂಬ ಶಿಲೀಂಧ್ರ ನಾಶಕವನ್ನು 10 ಮಿ.ಲೀ. ಪ್ರತಿ ಲೀಟರ್ ನೀರಿನೊಂದಿಗೆ ಸಿಂಪಡಿಸುವುದರಿಂದ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದರು.

ತೋಟಗಾರಿಕಾ ತಜ್ಞ ಡಾ. ಕೆ.ಕೀರ್ತಿಶಂಕರ್ ಮಾತನಾಡಿ, ಈರುಳ್ಳಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ತರಕಾರಿ ಸ್ಪೆಷಲ್ ಎಂಬ ಸೂಕ್ಷ್ಮ ಪೋಷಕಾಂಶಗಳ ಸಮೂಹವನ್ನು ಬಿತ್ತನೆಯಾದ 30 ಮತ್ತು 45 ದಿನಗಳ ನಂತರ 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಹಾಕಿ ಸಿಂಪಡಿಸುವುದರಿಂದ ಬೆಳೆಯಲ್ಲಿ ಹೆಚ್ಚು ಗಡ್ಡೆ ಗಾತ್ರ, ಬಣ್ಣ ಮತ್ತು ಇಳುವರಿ ಪಡೆಯಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net