ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಪಾಲಿಕೆ ಸದಸ್ಯರ ಸದನ ಸಮಿತಿ ರಚನೆ

h25-GB 1
Published on

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂಬ ಹಿಂದು ಪರ ಸಂಘಟನೆಗಳ ಬೇಡಿಕೆಯ ಹಿನ್ನೆಲೆಯಲ್ಲಿ ಹು ಧಾ ಮಹಾನಗರ ಪಾಲಿಕೆಯು ಐವರು ಸದಸ್ಯರನ್ನೊಳಗೊಂಡ ಸದನ ಸಮತಿ ರಚನೆಗೆ ನಿರ್ಧಾರ ತೆಗೆದುಕೊಂಡಿದೆ.

ಮಂಗಳವಾರ ಕರೆದ ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ವಿಷಯವಾಗಿ ಈ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ಸದಸ ಸಮಿತಿಯು ಆಗಸ್ಟ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ವರದಿ ಕೊಡಬೇಕು. ಸಮಿತಿಯ ತೀರ್ವನವೇ ಅಂತಿಮವಾಗಿರಲಿದೆ ಎಂದು ಮೇಯರ್ ಈರೇಶ ಅಂಚಟಗೇರಿ ರೂಲಿಂಗ್ ನಿಡಿದರು.

ಈ ವಿಷಯವಾಗಿ ಇಂದಿನ ಪಾಲಿಕೆ ಸಭೆಯನ್ನು 2 ಬಾರಿ ಮುಂದೂಡಲಾಗಿತ್ತು. ಮೊದಲ ಬಾರಿ ಕೋರಂ ಅಭಾವದಿಂದ 1 ತಾಸು ಸಭೆ ಮುಂದೂಡಿಕೆ. 2ನೇ ಬಾರಿ ಕಾಂಗ್ರೆಸ್ ಸದಸ್ಯರ ಗೈರಿನಿಂದ 15 ನಿಮಿಷಗಳ ಕಾಲ ಸಭೆ ಮುಂದೂಡಲಾಗಿದೆ. ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net