ಈದ್ ಮಿಲಾದ್ ಸಂಭ್ರಮದ ಆಚರಣೆ

Published on

ಬಳ್ಳಾರಿ : ಪ್ರವಾದಿ ಮಹಮ್ಮದ್ ಪೈಗಾಂಬರ್ ಜನಿಸಿದ ದಿನವನ್ನು ಶಾಂತಿ, ಸೌಹಾರ್ದದ ಪ್ರತೀಕವಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಿದರು. ಮೆರವಣಿಗೆ ಮಾಡಿ ಸಂಭ್ರಮಪಟ್ಟರು.
ಬೆಳಗ್ಗೆ ಫಾತೇಹಖಾನಿ (ಪ್ರಾರ್ಥನೆ ) ಓದಲಾಯಿತು. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮುಖ್ಯ ಮೆರವಣಿಗೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ಜನ ಸಾಕ್ಷಿಯಾದರು. ಹಸಿರು ಬಣ್ಣದ ಧ್ವಜ ಹಾಗೂ ಅರ್ಧ ಚಂದ್ರದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಎಲ್ಲ ಮಸೀದಿಗಳ ಮುಸ್ಲಿಮರು ಆಟೋ, ಟಾಟಾ ಏಸ್ ವಾಹನ, ತಳ್ಳು ಗಾಡಿ ಮೇಲೆ ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್ ಮಿನಾರ್‌ನ ಪ್ರತಿಕೃತಿಗಳ ಇರಿಸಿ ಮೆರವಣಿಗೆ ಮಾಡಲಾಯಿತು. ಚಿಣ್ಣರರಿಂದ ವಯಸ್ಕರ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಗೀತಕ್ಕೆ ಭಕ್ತಿಯಿಂದ ಭಾವದಿಂದ ಹೆಜ್ಜೆಗಳು ಹಾಕಿದರು. ಹಾಗೇಯೆ ದೇವರ ಹೆಸರಲ್ಲಿ ಆರಾಧನೆ ಮಾಡುತ್ತಾ, ಮಹ್ಮದ್ ಪೈಗಂಬರ ಸಂದೇಶಗಳ ಕುರಿತು ಘೋಷಣೆ ಕೂಗಿದರು.
ಇಲ್ಲಿನ ಕೌಲಬಜಾರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ನಗರದ ಮೋತಿ ವೃತ್ತ, ಬೆಂಗಳೂರು ರಸ್ತೆ, ರಾಯಲ್ ವೃತ್ತದ ಮೂಲಕ ಸಾಗಿತು. ಸಾವಿರಾರು ಜನ ಪಾಲ್ಗೊಂಡಿದ್ದರು. ನಗರದಲ್ಲಿ ಶಾಂತಿ ಕಾಪಾಡಲು ನಗರ ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬೆಳ್ಳಗೆ ಮನೆಗಳಲ್ಲಿ ಮಹಿಳೆಯರು ಮತ್ತು ಪುರುಷರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪುರುಷರು ಮಸೀದಿಗೆ ಬಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net