

ಬಾಗಲಕೋಟೆ: ಸೀರತ್ ಸಮಿತಿ ಅಂಜುಮನ್ ರಿ-Áಹೆ ಆಮ್ ಬಾಗಲಕೋಟೆ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಮ್ಮದ ಪೈಗಂಬರ ಅವರ ಜನ್ಮೋತ್ಸವ ಈದ್ ಮಿಲಾದನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ ಎಂದು ಸೀರತ್ ಸಮಿತಿ ಅಧ್ಯಕ್ಷ ಜಿ. ಎ. ಢಾಲಾಯತ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೧೪ ರಿಂದ ೧೮ ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. ೧೪ ರಂದು ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭಾಷಣ, ನಾತ್, ಕಿರಾತ್ ಸ್ಪರ್ಧೆಗಳು ನಡೆಯಲಿದೆ. ಸೆ.೧೫ ರಂದು ಮಹಮ್ಮದ ಪೈಗಂಬರ ಅವರ ಬದುಕು ಸಾಧನೆಗೆ ಸಂಬಂಽಸಿದಂತೆ ರಸಪ್ರಶ್ನೆ (ಕ್ವಿಜ್) ಸ್ಪರ್ಧೆಗಳು, ಅಂದು ಮಧ್ಯಾಹ್ನ ಮೂರು ಗಂಟೆಗೆ ಮಹಿಳೆಯರಿಗಾಗಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.೧೬ ರಂದು ಹಳೇ ಬಾಗಲಕೋಟೆದಲ್ಲಿ ಭವ್ಯ ಮೆರವಣಿಗೆ ಜರುಗುತ್ತದೆ. ಹಳೆಯ ಅಂಜುಮ£ಬ್ ಸಂಸ್ಥೆ ಆವರಣ ಆರಂಭವಾಗುವ ಮೆರವಣಿಗೆ ವಲ್ಲಭಭಾಯಿ ಸರ್ಕಲ್, ಪಂಕಾ ಮಸೀದ್, ಕಪಡಾ ಬಜಾರ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಶಿವಾನಂದ ಜೀನ್, ತರಕಾರಿ ಮಾರ್ಕೇಟ್ ಮಾರ್ಗವಾಗಿ ಸಾಗಿ ಪಂಕಾ ಮಜೀಸ್ ತಲುಪಿ ಮುಕ್ತಾಯವಾಗುತ್ತದೆ. ಅದೇ ದಿನ ಸಂಜೆ ೭ ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನವನಗರ ಅಂಜುಮನ್ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸೆ.೧೭ ರಂದು ಬೆಳಗ್ಗೆ ೯ ಗಂಟೆಗೆ ರಕ್ತದಾನ ಶಿಬಿರ, ೧೧ ಗಂಟೆಗೆ ಜಿ¯್ಲÁ ಸರ್ಕಾರಿ ಆಸ್ಪತ್ರೆ, ವೃದ್ಧ ಮತ್ತು ಅನಾಥಾಶ್ರಮದಲ್ಲಿ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.೧೮ ರಂದು ಬೆಳಗ್ಗೆ ೧೧ ಗಂಟೆಗೆ ನವನಗರದಲ್ಲಿ ಭವ್ಯ ಮೆರವಣಿಗೆ ಜರುಗುತ್ತದೆ. ಅಂಜುಮನ್ ಸಂಸ್ಥೆಯಿಂದ ಆರಂಭವಾಗುವ ಮೆರವಣಿಗೆ ಕಾಳಿದಾಸ ಸರ್ಕಲ್, ಕಲಾಭವನ, ಎಲï ಐ. ಸಿ. ಸರ್ಕಲï, ಅಂಬೇಡ್ಕರ ಭವನ, ಗಾರ್ಡನ್, ಜಿ¯್ಲÁ ಕ್ರೀಡಾಂಗಣ, ಕುಬಾ ಮಸೀದ್ ಮಾರ್ಗವಾಗಿ ಸಾಗಿ ಅಂಜುಮನ್ ಶಾದಿಮಹಲ್‌ಗೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ಸೀರತ್ ಸಮಿತಿ ಉಪಾಧ್ಯಕ್ಷ ಆರ್.ಎಚ್.ಪೆಂಡಾರ. ಅಮೀನಸಾಬ ರಕ್ಕಸಗಿ, ರಫೀಕಸಾಬ ಹನಮಸಾಗರ, ಅಲ್ತಾ-ï ಹುಸೇನ ಬೆಣ್ಣೂರ ಇತರರು ಇದ್ದರು.