ಈಜಾಡಲು ಹೋದ ಬಾಲಕ ಸಾವು

Published on

ಮಧುಗಿರಿ: ಮಂಗಳವಾರ ಶಾಲೆ ಮುಗಿಸಿ ಈಜಾಡಲು ಹೋದ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ತಾಲೂಕಿನ ಕೊಡಿಗೇನಹಳ್ಳಿ ಸವೋರ್ದಯ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತಿದ್ದ ರಂಗನಹಳ್ಳಿಯ ಹರ್ಷವರ್ಧನ್​ (14) ಡ್ರಾಯಿಂಗ್​ ಕ್ಲಾಸ್​ ಮುಗಿಸಿ ಹುಡುಗರ ಜತೆ ಕೊಡಿಗೇನಹಳ್ಳಿಯ ಜಯಮಂಗಲಿ ನದಿಯಲ್ಲಿ ಈಜಾಡಲು ಹೋಗಿದ್ದು, ಈಜು ಬಾರದೆ ಮೃತಪಟ್ಟಿದ್ದಾನೆ. ಮೃತನು ಕೊಡಿಗೇನಹಳ್ಳಿಯ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಮಧ್ಯಾಹ್ನ ಊಟ ಮಾಡಿ ಶಾಲೆಗೆ ತೆರಳಿದ್ದು, ಶಾಲೆಯಲ್ಲಿ 2 ಗಂಟೆಗೆ ಕ್ಲಾಸ್​ ಮುಗಿಸಿ ಈಜಾಡಲು ತೆರಳಿ ಈಜು ಬಾರದೆ ನೀರಲ್ಲಿ ಮುಳುಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕುರಿಗಾಹಿಗಳು ಬ್ಯಾಗಿನಲ್ಲಿದ್ದ ಆಧಾರ್​ ಕಾರ್ಡ್​ ಕಂಡು ಪಾಲಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಶವವನ್ನು ಮಧುಗಿರಿ ಶವಗಾರಕ್ಕೆ ರವಾನಿಸಿದ್ದು, ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net