ಈಜಲು ಹೋದ ಮೂವರು‌ ನೀರು ಪಾಲು

IMG-20221217-WA0095.jpg
Published on

ಹೊಸಪೇಟೆ: ಇಲ್ಲಿನ ಎಚ್ ಎಲ್ ಸಿ ಕನಾಲ್ ನಲ್ಲಿ ಈಜಾಡಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಶನಿವಾರ‌ ನಡೆದಿದೆ.
ಹೊಸಪೇಟೆ ಪದವಿ ವಿದ್ಯಾರ್ಥಿ ಅಂಜಿನಿ, ಪಿಯುಸಿ ವಿದ್ಯಾರ್ಥಿಗಳಾದ ಗುಂಡಾ ಗ್ರಾಮದ ಗುರುರಾಜ್, ಕೊಪ್ಪಳದ ವಸಂತ ನೀರು ಪಾಲಾಗಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋದವರಿಗಾಗಿ
ಶೋಧ ಕಾರ್ಯ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೊಸಪೇಟೆಯ ಹೊರವಲಯದಲ್ಲಿರುವ ಎಚ್ ಎಲ್‌ಸಿ ಕಾಲುವೆಯಲ್ಲಿ ಈಜಾಡಲು
ತೆರಳಿದ್ದ ೬ ವಿದ್ಯಾರ್ಥಿಗಳ ಪೈಕಿ ಮೂವರು ಈಜಿ ದಡ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net