ಈಜಲು ಹೋದ ತಂದೆ-ಮಗ ಸಾವು

Published on

ಬಸವಕಲ್ಯಾಣ: ಈಜು ಕಲಿಯಲು ಬಾವಿಗಿಳಿದ ಮಗನೊಂದಿಗೆ ತಂದೆಯೂ ಮೃತಪಟ್ಟ ಘಟನೆ ಬಗದೂರಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಸೂರ್ಯಕಾಂತ ಕೇಶ್ವರ (42) ಮತ್ತು ಅಭಿಷೇಕ (16) ಮೃತ ತಂದೆ-ಮಗ. ಈಜು ಕಲಿಯಲು ಬಾವಿಗೆ ಇಳಿಯುವಂತೆ ಪುತ್ರನಿಗೆ ಹೇಳಿದ ತಂದೆ, ಆತ ಬಾವಿ ನೀರಿನ ಆಳದಲ್ಲಿದ್ದ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿ ಸೂರ್ಯಕಾಂತ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕೆಸರಿನಡಿ ಸಿಲುಕಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಪಿಎಸ್ಐ ಬಸಲಿಂಗಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಡಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net