

ಸೊರಬ: ಕಳೆದ ಆರು ವರ್ಷಗಳಿಂದ ಚಂದ್ರಗುತ್ತಿಯಲ್ಲಿ ದಸರಾ ಉತ್ಸವ ನಡೆಸಿಕೊಂಡು ಬಂದಂತೆ ಈ ವರ್ಷವೂ ಅದ್ದೂರಿಯಿಂದ ಸಾಂಸ್ಕೃತಿಕ ಉತ್ಸವ ನಡೆಸಲಾಗುವುದು ಎಂದು ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.
ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ 7ನೇ ವರ್ಷದ ದಸರಾ ಉತ್ಸವ ನಡೆಸುತ್ತಿದೆ. ಉತ್ಸವಕ್ಕೆ ಮೆರುಗು ನೀಡುವಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸದಸ್ಯರೆಲ್ಲ ಸಭೆಯಲ್ಲಿ ಚರ್ಚಿಸಿ ಉತ್ತಮ ಸಲಹೆ ನೀಡಿದ್ದಾರೆ. ಅದರಂತೆ ದಸರಾ ಉತ್ಸವ ನಡೆಯಲಿದೆ ಎಂದರು.
ಉಪಾಧ್ಯಕ್ಷ ರಾಮಣ್ಣ ಎಂ. ಸ್ವಾದಿ, ಗ್ರಾಪಂ ಅಧ್ಯಕ್ಷ ಎಂ.ಪಿ.ರತ್ನಾಕರ್, ಸದಸ್ಯ ಎಂ.ಬಿ.ರೇಣುಕಾ ಪ್ರಸಾದ್, ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಚಂದ್ರಗುತ್ತಿ, ಖಜಾಂಚಿ ವಸಂತ್ ಶೇಟ್, ಮಂಜುನಾಥ್ ಶಣೈ, ನಿರಂಜನ ಅರ್ಚಕ್, ಯಶವಂತಪ್ಪ, ಗಣಪತಿ, ಪ್ರಕಾಶ್ ಮಿರ್ಜಿ, ಎನ್.ಪ್ರಕಾಶ್, ರೇಣುಕಾ ಶ್ರೀಧರ್, ಭರತ್, ರಾಘವೇಂದ್ರ, ಧರ್ಮಲಿಂಗಂ ಇತರರಿದ್ದರು.