ಈ ರಾಷ್ಟ್ರೀಯ ಹೆದ್ದಾರಿ ಬಂದ್

IMG-20220802-WA0001.jpg
Published on

ಭಟ್ಕಳ:ಹಿಂದೆಂದೂ ಕಂಡರಿಯದ ಮಹಾ ಮಳೆಗೆ ಭಟ್ಕಳ ನಲುಗಿದೆ. ಸೋಮವಾರ ಸಾಯಂಕಾಲದಿಂದ‌‌ ಮಂಗಳವಾರ ಬೆಳಗಿನವರೆಗೆ 312 ಮಿಮೀ ಮಳೆಯಾಗಿದೆ.
ಭಟ್ಕಳದ ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ, ಬೆಂಗ್ರೆ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಎಸ್ ಡಿ ಆರ್ ಎಫ್ ತಂಡ ಜನರ ರಕ್ಷಣೆ ಮಾಡುತ್ತಿದೆ. ಶಿರಾಲಿ‌ ಚಂಡ ಮಾರುತ ಆಶ್ರಯ ತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಹೆದ್ದಾರಿ ಬಂದ್
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಮಾರು 13 ಕಿಮೀ ನೀರು ನಿಂತಿದ್ದು,ಮಂಗಳೂರು- ಗೋವಾ ಹೆದ್ದಾರಿ ವಾಹ ಸಂಚಾರ ಸಂಪೂರ್ಣ ಬಂದ್ ಆಗಿದೆ. ಎರಡೂ ಕಡೆ ನಾಲ್ಕು ಕಿಮೀ ದೂರದವರೆಗೆ ವಾಹನಗಳು‌ ನಿಂತಿವೆ. ಸದ್ಯ ಜಿಲ್ಲೆಯ ಕರಾವಳಿಯಲ್ಲಿ ಪ್ರಯಾಣಿಸದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net