ಈ ಭಾರಿ ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತ:ಪುಷ್ಪ ಅಮರರ್ನಾಥ

ಈ ಭಾರಿ ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತ:ಪುಷ್ಪ ಅಮರರ್ನಾಥ
Published on

ಹಾಸನ: ಕಳೆದ ಬಾರಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸಿದ ಸಂಸದ ಪ್ರಜ್ವಲ್ ರೇವಣ್ಣ ಜಿಲ್ಲೆಗೆ ಯಾವುದೇ ರೀತಿ ಗುರುತರವಾದ ಕೆಲಸ ಮಾಡಿಲ್ಲ. ಆದ್ದರಿಂದ ಈ ಬಾರಿ ಬದಲಾವಣೆ ತರುವ ಮೂಲಕ ಶ್ರೇಯಸ್ ಪಟೇಲ್ ಅವರನ್ನು ಗೆಲಿಸಬೇಕು ಎಂದು ಕಾಂಗ್ರೆಸ್‌ನ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಪುಷ್ಪ ಅಮರರ್ನಾಥ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈ ಬಾರಿ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಅದರಲ್ಲಿಯೂ ಕೂಡ ಹಾಸನದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್‌ಅವರ ಗೆಲುವು ನಿಶ್ಚಿತ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಕಳೆದ 25 ವರ್ಷಗಳಿಂದ ಒಂದೇ ಕುಟುಂಬ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿದ್ದು, ಸರ್ವಾಧಿಕಾರದಂತೆ ವರ್ತಿಸುತ್ತಿದ್ದಾರೆ. ಇದರಿಂದ ಬೇಸತ್ತು ಜನರು ಸರಳ, ಸಜ್ಜನ ವ್ಯಕ್ತಿತ್ವದ ಶ್ರೇಯಸ್ ಪಟೇಲ್ ಅವರನ್ನು ಜಿಲ್ಲೆಯ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನಿಯನ್ನು ಕೊಟ್ಟಂತಹ ಜಿಲ್ಲೆ ಹಾಸನ ಆದರೆ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳು ಇದೆ.ದೇವೇಗೌಡರನ್ನ ಪ್ರಧಾನಿ ಮಾಡಲು ಸಹಕರಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಜಾತ್ಯತೀತ ಎಂಬ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿಕೊಂಡು ಮುಂದೆ ನಮ್ಮ ಪಕ್ಷವನ್ನು ವಿಲೀನ ಮಾಡುವ ಮಾತನಾಡುತ್ತಿರುವ ದೇವೇಗೌಡರ ಹೇಳಿಕೆ ನಿಜಕ್ಕೂ ಹಾಸ್ಯಸ್ಪದವಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಂಸದರು ಐದು ವರ್ಷದಲ್ಲಿ ತಾನು ಯಾವ ಕೆಲಸ ಮಾಡಿದ್ದೇನೆ ಎಂದು ಹೇಳುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕೇವಲ ಜನರಿಗೆ ಸುಳ್ಳು ಹೇಳಿಕೊಂಡು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಅಲ್ಲದೆ ತೆನೆ ಹೊತ್ತ ಮಹಿಳೆಯ ಹೆಸರು ಕಮಲ ಎಂದು ಹೇಳುವ ಮೂಲಕ ಜಾತ್ಯತೀತ ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆ ಮತ್ತು ರಾಜ್ಯದಲ್ಲಿ ಒಕ್ಕಲಿಗ ಸಮುದಾಯವನ್ನು ಬೆಳೆಸಲು ದೇವೇಗೌಡರ ಕುಟುಂಬ ಬಿಡುವುದಿಲ್ಲ. ಅಲ್ಲದೆ ಜಿಲ್ಲಾ ಪಂಚಾಯತಿಯಿಂದ ಹಿಡಿದು ಪ್ರಧಾನಿವರಿಗೂ ಕೂಡ ಅಧಿಕಾರ ಅವರ ಕುಟುಂಬಕ್ಕೆ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತರು ಮತ್ತು ಎರಡನೇ, ಮೂರನೇ ಹಂತದ ನಾಯಕರಿಗೆ ಯಾವುದೇ ಹುದ್ದೆಗಳಿಲ್ಲ, ಆದ್ದರಿಂದ ಅವರನ್ನ ನಮ್ಮ ಪಕ್ಷಕ್ಕೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು.
ಎಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ದಿಕ್ಕು ತಪ್ಪಿ ಹಾಗೂ ಆದಿತಪ್ಪಿ ಹೋಗುತ್ತಿದ್ದಾರೆ. ಅವರು ಮಹಿಳೆಯರ ಬಗ್ಗೆ ಕೀಲು ಮಟ್ಟದ ಪದ ಪ್ರಯೋಗ ಮಾಡಿರುವುದು ನಿಜಕ್ಕೂ ಖಂಡನೀಯ. ಅಲ್ಲದೆ ಜಿಲ್ಲೆಯಲ್ಲಿ ಯಾವೆಲ್ಲ ಅಭಿವೃದ್ಧಿ ಕೆಲಸಗಳಾಗಬೇಕು ಅವುಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಅವುಗಳನ್ನ ಮಾಡುವ ಭರವಸೆಯನ್ನ ನೀಡಿದರು.

ಭಾವುಕರಾದ ಅಭ್ಯರ್ಥಿಯ ಪತ್ನಿ:
ಸುದ್ದಿಗೂಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಪಟೇಲ್ ಅವರ ಪತ್ನಿ ಅಕ್ಷತಾ, ನಮ್ಮ ಕುಟುಂಬ ರಾಜಕೀಯವಾಗಿ ಸಾಕಷ್ಟು ನೊಂದಿದೆ. ಕಳೆದ ಮೂರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಈ ಬಾರಿ ಒಮ್ಮೆ ಅವಕಾಶ ಮಾಡಿಕೊಟ್ಟರೆ ನಿಮ್ಮಗಳ ಸೇವೆ ಮಾಡುತ್ತಾವೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಶ್ರೇಯಸ್ ಪಟೇಲ್ ಅವರು ವೈಯಕ್ತಿಕವಾಗಿ ಎಲ್ಲರನ್ನ ಗೌರವಿಸುತ್ತಾರೆ. ಜನರ ಸೇವೆ ಮಾಡುವ ತುಡಿತ ಹೊಂದಿದ್ದಾರೆ. ಮನೆಗೆ ಯಾರೇ ಬಂದರೂ ಕೂಡ ಎಲ್ಲರನ್ನ ವಿನಯದಿಂದ ಮಾತನಾಡಿಸುತ್ತಿರುವ ಮೂಲಕ ಇದು ಅವರಿಗೆ ಶ್ರೀರಕ್ಷೆಯಾಗಿದೆ. ಮುಂದಾಗು ಕೂಡ ನಿಮ್ಮಗಳ ಸೇವೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಯಾವಾಗಲೂ ಅವರು ಶ್ರಮಿಸಲಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಸಹಕಾರಿಸಬೇಕು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net