ಈ ಬಾರಿ ದಾವಣಗೆರೆಯಲ್ಲೇ ಐಸಿಸಿ ಸಭೆ ನಡೆಸಿ- ತೇಜಸ್ವಿ ಪಟೇಲ್ ಒತ್ತಾಯ

001-tejaswepatel.jpg
Published on

ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಈ ಬಾರಿಯ ಭದ್ರಾ ನೀರಾವರಿ ಸಲಹಾ ಸಭೆಯನ್ನು ದಾವಣಗೆರೆಯಲ್ಲೇ ನಡೆಸಲು ಆಲೋಚಿಸಬೇಕು ಎಂದು ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲ ನಿರ್ದೇಶಕ ತೇಜಸ್ವಿ ವಿ. ಪಟೇಲ್ ಆಗ್ರಹಿಸಿದ್ದಾರೆ.

ಭದ್ರಾ ಅಚ್ಚುಕಟ್ಟಿನಲ್ಲಿ ಭತ್ತ ನಾಟಿಗೆ ಹಲವೆಡೆ ಈಗಾಗಲೇ ಬೀಜ ಚೆಲ್ಲಿದ್ದರೆ, ಕೆಲವೆಡೆ ರೈತರು ಜಲಾಶಯದಿಂದ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಪ್ರಸ್ತುತ ಹಂಗಾಮಿಗೆ ನೀರಿನ ತೀರ್ಮಾನ ಕೈಗೊಳ್ಳಲು ಬೆಂಗಳೂರಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಯೋಚಿಸಲಾಗುತ್ತಿದೆ ಎಂಬ ಸುದ್ದಿ ಇದೆ. ಈ ಸಭೆಯನ್ನು ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲೇ ಸದಾ ನಡೆಯಬೇಕು. ಒಂದು ಹಂಗಾಮಿಗೆ ಶಿವಮೊಗ್ಗದಲ್ಲಿ ಒಂದು ಹಂಗಾಮಿನಲ್ಲಿ ದಾವಣಗೆರೆಯಲ್ಲಿ ಸಭೆ ಆಯೋಜಿಸಬೇಕು ಎಂಬ ನಿಯಮ ರೂಪಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net