ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ

29BTP02
ಬೆಟ್ಟದಪುರ ಸಮೀಪದ ಹಸುವಿನ ಕಾವಲು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಮತಯಾಚನೆ ಮಾಡಿದರು. ಅಣ್ಣಯ್ಯಶೆಟ್ಟಿ, ಪ್ರೀತಿ ಅರಸ್, ಕುಶಾಲ್‌ಗೌಡ, ಗೋವಿಂದೇಗೌಡ, ಮಲ್ಲನಾಯಕ, ಮೈಲಾರಪ್ಪ, ಅನಿಲ್ ಕುಮಾರ್ ಇದ್ದರು.
Published on

ಬೆಟ್ಟದಪುರ: ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ದುರಾಡಳಿತಕ್ಕೆ ಬೇಸತ್ತು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಪಣತೊಟ್ಟಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಹೇಳಿದರು.

ಬೆಟ್ಟದಪುರ ಸಮೀಪದ ಹಸುವಿನ ಕಾವಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮತಯಾಚನೆ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ಪಂಚರತ್ನ ಯಾತ್ರೆ ಯೋಜನೆಗಳಿಗೆ ರಾಜ್ಯದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ಬಹುತೇಕ ಖಚಿತವಾಗಿದೆ ಎಂದರು.

ಪಂಚರತ್ನ ಯೋಜನೆಗಳಿಂದ ರಾಜ್ಯದ ರೈತರಿಗೆ ಅನುಕೂಲವಾಗಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ ಹೈಟೆಕ್ ಆಸ್ಪತ್ರೆ ನಿರ್ಮಾಣದಿಂದ ಗ್ರಾಮೀಣ ಭಾಗದ ರೋಗಿಗಳ ಆರ್ಥಿಕ ವೆಚ್ಚವನ್ನು ತಗ್ಗಿಸಬಹುದಾಗಿದೆ. ರೈತರಿಗೆ ಎಕರೆಗೆ 10 ಸಾವಿರ ರೂ. ನೀಡುವುದರಿಂದ ವ್ಯವಸಾಯ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ರೈತರು ಸೇರಿದಂತೆ ರಾಜ್ಯದ ಎಲ್ಲ ವರ್ಗದ ಜನರು ಕುಮಾರಸ್ವಾಮಿ ಸಿಎಂ ಆಗುವಂತೆ ಬಯಸುತ್ತಿದ್ದಾರೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಕೀಲ ಗೋವಿಂದೇಗೌಡ, ಸಿ.ಎಸ್.ಕುಶಾಲ್‌ಗೌಡ, ಮುಖಂಡರಾದ ಮೈಲಾರಪ್ಪ, ಮಲ್ಲನಾಯಕ, ತರಿಕಲ್ ರಾಜು, ಅನಿಲ್‌ಕುಮಾರ್, ಪ್ರೀತಿ ಅರಸ್, ಸಿ.ಎನ್.ರವಿ, ವಿಜಯ್, ರಾಮೇಗೌಡ, ಮಂಜೇಗೌಡ, ಮಂಜುನಾಥ್, ಸಿದ್ದರಾಮು, ಸ್ವಾಮಿ, ಮಾಳೇಗೌಡ, ನಾಗರಾಜ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net