ಇಸ್ರೋ ಸಾಧನೆಗೆ ಜಾಗತಿಕ ಮನ್ನಣೆ

9..1
ನಿಪ್ಪಾಣಿ ನಗರದ ಜಿಐ ಬಾಗೇವಾಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ವಿಜ್ಞಾನಿ ಚಿದಾನಂದ ಮಗದುಮ್ಮ ಉದ್ಘಾಟಿಸಿದರು. ಪ್ರೊ.ಸಾಗರ ಮಿರ್ಜೆ, ಡಾ. ಎಂ.ಎಂ. ಹುರಳಿ, ಡಾ. ಆರ್.ಜಿ. ಖರಾಬೆ, ಡಾ.ಅತುಲಕುಮಾರ ಕಾಂಬಳೆ ಇದ್ದರು.
Published on

ನಿಪ್ಪಾಣಿ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ ಪ್ರಯೋಗಗಳು ಮತ್ತು ಯಶಸ್ಸಿನಿಂದ ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದು, ಚಂದ್ರಯಾನ-3ರ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಭಾರತವನ್ನು ಉಳಿದ ರಾಷ್ಟ್ರಗಳು ಅನುಕರಣೆ ಮಾಡುತ್ತಿವೆ. ಇದು ಭಾರತೀಯರು ಹೆಮ್ಮೆ ಪಡುವ ಸಂಗತಿ ಎಂದು ತ್ರಿವೇಂದ್ರಂನ ಇಸ್ರೋ ವಿಜ್ಞಾನಿ ಚಿದಾನಂದ ಮಗದುಮ್ಮ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಪದವಿ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಮಿಷನ್ ಚಂದ್ರಯಾನ-3 ವಿಷಯ ಕುರಿತು ವಿದ್ಯಾರ್ಥಿಗಳಿಗಾಗಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇಸ್ರೋ ಕೈಗೊಂಡ ಬಾಹ್ಯಾಕಾಶ ನೌಕೆಗಳ ಸಮಗ್ರ ಮಾಹಿತಿ, ಚಂದ್ರಯಾನದಲ್ಲಿ ವಿಜ್ಞಾನಿಗಳ ವಿಶೇಷ ಸಾಧನೆ ತಿಳಿಸಿಕೊಟ್ಟರು.

ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಚಾರ್ಯ ಡಾ. ಆರ್.ಜಿ. ಖರಾಬೆ, ಗಣಕ ವಿಜ್ಞಾನ ವಿಭಾಗದ ಪ್ರೊ.ಸಾಗರ ಮಿರ್ಜೆ, ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ವಿಮಲ ಮೂಡಲಗಿ, ತೇಜಸ್ ಇಂಗಳೆ, ಸಂಧ್ಯಾ, ಸಾಕ್ಷಿ, ನಿಯೋಗಿತಾ ಇತರರಿದ್ದರು.

100 ವಿದ್ಯಾರ್ಥಿಗಳು ಭಾಗವಹಿಸಿದ್ದರು. 30 ವಿದ್ಯಾರ್ಥಿಗಳು ಪ್ರಬಂಧ ಬರೆದರು. ಅಥಣಿಯ ಎಸ್‌ಎಸ್‌ಎಂಎಸ್ ಕಾಲೇಜಿನ ಸಮೃದ್ಧಿ ಮೆಣಶಿ, ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನ ಲಕ್ಷ್ಮೀ ಕಂಬಾರ ಹಾಗೂ ನಿಪ್ಪಾಣಿಯ ಜಿ.ಐ.ಬಾಗೇವಾಡಿ ಕಾಲೇಜಿನ ವಿದ್ಯಾರ್ಥಿ ನಮ್ರತಾ ಚೌಗಲಾ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net