

ಕಲಬುರಗಿ: ಅಂತಾರಾಷ್ಟಿçÃಯ ಕೃಷ್ಣಾ ಪ್ರಜ್ಞಾ ಸಂಸ್ಥೆ(ಇಸ್ಕಾನ್)ಯಿAದ ನಗರದಲ್ಲಿ ಓಡಿಶಾದ ಪುರಿ ಜಗನ್ನಾಥ ದೇವರ ರಥೋತ್ಸವ ಮಾದರಿಯಲ್ಲಿ ಭವ್ಯ ರಥೋತ್ಸವ ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದ ಮಧ್ಯೆ ನೆರವೇರಿತು.
ನಗರದ ನಗರೇಶ್ವರ ಶಾಲೆಯ ಆವರಣದಲ್ಲಿ ಭಾನುವಾರ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಶ್ರದ್ಧೆ, ಭಕ್ತಿಯೊಂದಿಗೆ ಭಕ್ತರ ಜೈಕಾರಗಳನ್ನು ಮೊಳಗಿಸುತ್ತ ರಥಯಾತ್ರೆಗೆ ಚಾಲನೆ ನೀಡಲಾಯಿತು.
ನೂರಾರು ಯುವಕ, ಯುವತಿಯರು, ಭಕ್ತರು ಭಕ್ತಿಯಿಂದ ಯಾತ್ರೆಯಲ್ಲಿ ಭಾಗವಹಿಸಿ, ತೇರನ್ನು ಎಳೆದರು. ರಥದ ಮುಂದೆ ಛತ್ರಿ, ಛಾಮರಗಳೊಂದಿಗೆ ಶ್ರೀಕೃಷ್ಣ ಪಲ್ಲಕ್ಕಿ ಉತ್ಸವ ಸಾಗಿತು. ರಥ ಸಾಗುವ ಮಾರ್ಗದಲ್ಲಿ ಬೃಹತ್ ರಂಗೋಲಿಗಳನ್ನು ಬಿಡಿಸಿ, ಭಕ್ತರು ರಥವನ್ನು ಸ್ವಾಗತಿಸಿದರು. ರಥದ ಮುಂದೆ ಭಜನೆ, ಕೀರ್ತನೆ, ಹರೇ ರಾಂ, ಹರೇ ಕೃಷ್ಣ ನಾಮಘೋಷಣೆ ಮೊಳಗಿದವು. ನೂರಾರು ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು.
ನಗರೇಶ್ವರ ಶಾಲೆ, ಕಪಡಾ ಬಜಾರ್, ಪುಟಾಣಿ ಗಲ್ಲಿ, ಸೂಪರ್ ಮಾರ್ಕೆಟ್, ಜಗತ್ ಸರ್ಕಲ್ ಹಾಗೂ ಡಾ.ಎಸ್.ಎಂ ಪಂಡಿತ ರಂಗಮAದಿರಕ್ಕೆ ಆಗಮಿಸಿ, ರಥಯಾತ್ರೆ ಸಂಪನ್ನಗೊAಡಿತು. ನಂತರ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರವಚನ, ಮಹಾ ಪೂಜೆ, ಮಹಾ ಆರತಿ ನೆರವೇರಿದವರು. ನಂತರ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀ ಉದ್ಧವಾನಂದ ದಾಸ್ ಸೇರಿದಂತೆ ಭಕ್ತರು ಇದ್ದರು.