

ಬೆಳಗಾವಿ:ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೆ.7ರಂದು ಬೆಳಗಾವಿಯ ಕೃಷ್ಣ ಪ್ರಜ್ಞೆಯ ಇಂಟರ್‌ನ್ಯಾಷನಲ್ ಸೊಸೈಟಿ (ಇಸ್ಕಾನ್) ಆಚರಿಸುತ್ತಿದೆ. ಈ ಸಂದರ್ಭದಲ್ಲಿ,ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಸ್ಕಾನ್‌ದಲ್ಲಿ ಶ್ರೀ ರಾಧಾ ಗೋಕುಲಾನಂದ ಮಂದಿರದಲ್ಲಿ ಸೆ.6 ರವರೆಗೆ ಪ್ರತಿದಿನ ಸಂಜೆ 7 ರಿಂದ 8:30 ರವರೆಗೆ ಪರಮಪೂಜ್ಯ ಭಕ್ತಿ ರಸಾಮೃತಸ್ವಾಮಿ ಮಹಾರಾಜರ ಕೃಷ್ಣ ಕಥೆಯ ಪ್ರವಚನ ನಡೆಯಲಿದೆ. ಸೆ.7ರಂದು ಜನ್ಮಾಷ್ಟಮಿಯ ಪ್ರಮುಖ ದಿನವಾಗಿದೆ. ಅಂದು ಬೆಳಗ್ಗೆ ಭಾಗವತ ಕಥಾ, ಸಂಜೆ 5.30 ರಿಂದ 6.30 ರವರೆಗೆ ಮತ್ತು ಬಳಿಕ ರಾತ್ರಿ 9 ಗಂಟೆಯವರೆಗೆ ಅಭಿಷೇಕ, ನಾಟ್ಯಲೀಲಾ ಕಾರ್ಯಕ್ರಮ 11 ಗಂಟೆಯವರೆಗೆ ನಡೆಯಲಿದೆ. ಅನಂತರ ಶ್ರೀಭಕ್ತಿರಸಾಮೃತ ಸ್ವಾಮಿ ಮಹಾರಾಜರಿಂದ ಕೃಷ್ಣ ಕಥಾ ಸಮಾರೋಪದ ಬಳಿಕ ಭಕ್ತಾಧಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸೆ.8ಪ್ರಭುಪಾದರ ಅಭಿರ್ಭವ ದಿನ : ಇಸ್ಕಾನ್ ಸಂಸ್ಥಾಪಕ ಶ್ರೀಪ್ರಭುಪಾದರ ಜನ್ಮದಿ ಜನ್ಮಾಷ್ಟಮಿ 2ನೇ ದಿನ ಸೆ.8 ರಂದು, ಅಂದು ಬೆಳಗಿನ ಜಾವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯುವಂತೆ ಇಸ್ಕಾನ್ ಪ್ರಕಟಣೆ ಮನವಿ ಮಾಡಿದೆ.