ಇಷ್ಟಲಿಂಗ ಪೂಜೆ, ವೇದ-ಮಂತ್ರ ರೂಢಿಸಿಕೊಳ್ಳಿ

20LNG01
Published on

ಲಿಂಗಸುಗೂರು: ಇಷ್ಟಲಿಂಗ ಮಹಾಪೂಜೆ, ಸನಾತನ ಪರಂಪರೆ, ಧರ್ಮಾಚರಣೆಗಳ ಪಾಲನೆಯಿಂದ ಬದುಕು ಸಾರ್ಥಕಗೊಳ್ಳಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದ ವೀರಶೈವ ಜಂಗಮ ಸಮಾಜದ ಜಾಗದಲ್ಲಿ ನಿರ್ಮಿಸುತ್ತಿರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಮಂಗಲ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಕ್ಷತೆ ಪ್ರೋಕ್ಷಣೆ ಮಾಡಿ ಗುರುವಾರ ಸಂಜೆ ಮಾತನಾಡಿದರು. ಪಟ್ಟಣದಲ್ಲಿ ಕಳೆದ ವರ್ಷ ದಸರಾ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿರುವುದು ಸಂತಸ ತಂದಿದೆ. ತಾಲೂಕಿನ ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯ ನಿರ್ಮಿಸುವ ಸಂಕಲ್ಪ ಹೊಂದಿದ್ದೆವು ಎಂದರು.

ಜಂಗಮ ಸಮಾಜದಿಂದ ಜಗದ್ಗುರು ರೇಣುಕಾಚಾರ್ಯರ ದೇವಸ್ಥಾನ, ಮಂಗಲ ಭವನ ಮತ್ತು ಆಡಳಿತ ಕಚೇರಿ ನಿರ್ಮಿಸುತ್ತಿರುವುದು ಸಂತಸ ತಂದಿದೆ. ರಂಭಾಪರಿ ಪೀಠದಿಂದ ಸದರಿ ಅಭಿವೃದ್ಧಿ ಕಾಮಗಾರಿಗೆ ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಪರಂಪರಾಗತವಾಗಿ ಬಂದಿರುವ ಇಷ್ಟಲಿಂಗ ಪೂಜೆ, ವೇದ ಮಂತ್ರಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಮುಂದೆ ಜಂಗಮ ಸಮಾಜ ಈ ಜಾಗದಲ್ಲಿ ಸಂಸ್ಕೃತಿ ಪಾಠಶಾಲೆ ಆರಂಭಿಸಿದರೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಅನುಕೂಲವಾಗಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಮಾಣಿಕೇಶ್ವರಿ ಮಠದ ಮಾತಾ ನಂದಿಕೇಶ್ವರಿ ಅಮ್ಮ, ಪ್ರಮುಖರಾದ ಜಂಬಯ್ಯಸ್ವಾಮಿ ಹಿರೇಮಠ, ಮಹಾದೇವಯ್ಯ ಗೌಡೂರು, ಮಹೇಶ ನಂದಿಕೋಲಮಠ, ವೀರಭದ್ರಯ್ಯ ವಸ್ತ್ರದ್, ಚನ್ನಬಸವ ಹಿರೇಮಠ, ಮರಿಸ್ವಾಮಿ ವಟಗಲ್, ಶಿವಯ್ಯಸ್ವಾಮಿ, ವೀರೇಶ ಜಗವತಿಮಠ, ವಿರೂಪಾಕ್ಷಯ್ಯ ಹಿರೇಮಠ, ಶಂಭುಲಿಂಗಯ್ಯ ಕಳಸದಗುಡಿ, ಗುರುಬಾಯಿ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net