

ಮಳಖೇಡ: ಇಷ್ಟಲಿಂಗ ಧಾರಣೆ ಮಾಡುವುದರಿಂದ ಜೀವನದಲ್ಲಿನ ಅನಿಷ್ಟಗಳೆಲ್ಲ ದೂರವಾಗುತ್ತವೆ ಎಂದು ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು ನುಡಿದರು.
ಮೂಲಾಧಾರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ವೀರಶೈವ ಧರ್ಮ ಶ್ರೇಷ್ಠವಾದದ್ದು, ಅದರಲ್ಲಿರುವ ಇಷ್ಟಲಿಂಗ ದರ್ಪಣ, ಪ್ರಾಣಲಿಂಗ ಪ್ರತಿಬಿಂಬ ಎಂಬುÄದರ ಬಗ್ಗೆ ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಿತ್ಯ ಗುರು, ಲಿಂಗ, ಜಂಗಮರನ್ನು ಪೂಜಿಸುತ್ತ, ಧರ್ಮದ ದಾರಿಯಲ್ಲಿ ನಡೆದರೆ ಜೀವನ ಪಾವನವಾಗುತ್ತದೆ ಎಂದರು.
ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ್, ಕಸಾಪ ವಲಯ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಟೆಂಗಳಿಯ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಗುರಣ್ಣಪ್ಪ ತಳಕಿನ, ಮಲ್ಲಿಕಾರ್ಜುನ ಅವಂಟಿ, ಭೀಮರಾವ ಮಾಲಿಪಾಟೀಲ್, ಕಲ್ಯಾಣಯ್ಯ ಪುರಾಣಿಕ, ಗುರುರಾಜ ತಳಕಿನ, ಶರಣಯ್ಯ ಸ್ಥಾವರಮಠ, ಶಾಂತಪ್ಪ ಮುಕರಂಬಿ, ಸಂದೀಪ ತೇಗಲತಿಪ್ಪಿ, ರಾಜಶೇಖರಯ್ಯ ಮಠಪತಿ, ರವಿ ತೇಗಲತಿಪ್ಪಿ, ದೇವಾನಂದ ಪುರಾಣಿಕ, ಮಲಕಣ್ಣ ದಂಡೋತಿ, ಈರಣ್ಣ ಮರಗೋಳ, ರಾಜಶೇಖರ ಬಂಡಿ, ದೇವಿಂದ್ರಪ್ಪ ಬಿಜನಳ್ಳಿ ಇತರರಿದ್ದರು.
ಶ್ರೀಮಠದ ಆವರಣದಲ್ಲಿ ನವಗ್ರಹ ಹಾಗೂ ನಾಗ ಮೂರ್ತಿ ಪ್ರತಿಷ್ಠಾಪನೆ, ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷಾ ನಡೆಯಿತು. ವೀರೇಶ ಮಠಪತಿ ಸ್ವಾಗತಿಸಿ, ನಿರೂಪಣೆ ಮಾಡಿದರು. ನಾಗರಾಜ ಮಠಪತಿ ವಂದಿಸಿದರು.