ಇವಿಎಂ ಕುರಿತು ಸುಪ್ರೀಂ ತೀರ್ಪು ಸ್ವಾಗತಾರ್ಹ

AVP
Published on

ಚಿತ್ರದುರ್ಗ: ಇವಿಎಂ ಮತಯಂತ್ರ ಸುರಕ್ಷಿತ ಹಾಗೂ ನಂಬಿಕಾರ್ಹ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಇವಿಎಂ ಮತಯಂತ್ರ ಕುರಿತು ಭಾನುವಾರ ನಡೆದ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದೊಂದು ವರ್ಷದಿಂದಲೂ ನಮ್ಮ ಪರಿಷತ್ ಇವಿಎಂ ಮತಯಂತ್ರ ಅಸುರಕ್ಷಿತವೆಂದು ಹೋರಾಟ ನಡೆಸಿದೆ. ಆದರೂ ಸುಪ್ರೀಂ ಕೋರ್ಟ್‌ನ ತೀರ್ಮಾನ ಸ್ವಾಗತಾರ್ಹ. ದೇಶದ ನ್ಯಾಯಾಂಗ ವ್ಯವಸ್ಥೆ ಗಟ್ಟಿ ಇರುವ ಕಾರಣ ಇಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎಂಬುದು ಜನಸಾಮಾನ್ಯರ ನಂಬಿಕೆಯಾಗಿದೆ ಎಂದರು.

ಮತ ಚೀಟಿ ವ್ಯವಸ್ಥೆ ಇದ್ದಾಗ ಮತಗಟ್ಟೆಗಳನ್ನು ವಶಕ್ಕೆ ಪಡೆದು ನಡೆಸುತ್ತಿದ್ದ ಚುನಾವಣಾ ಅಕ್ರಮಗಳಿಗೆ ಇವಿಎಂ ಮತಯಂತ್ರದ ವ್ಯವಸ್ಥೆಯು ಪರಿಹಾರ ಕಂಡುಹಿಡಿದಿದೆ ಎಂದು ನ್ಯಾಯಾಲಯ ಹೇಳಿರುವುದು ಸತ್ಯ ಎಂದರು ಹೇಳಿದರು.

ಭೀಮ್ ಆರ್ಮಿ ಅಧ್ಯಕ್ಷ ಅವಿನಾಶ್, ಉಪನ್ಯಾಸಕ ನಾಗೇಂದ್ರಪ್ಪ, ರವಿಕುಮಾರ್, ಬೆಸ್ಕಾಂ ತಿಪ್ಪೇಸ್ವಾಮಿ, ಶಿಕ್ಷಕಿ ಉಷಾ ರಾಣಿ, ಗಿರಿಜಾ ನಾಗಭೂಷಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net