

ಬಾಗಲಕೋಟೆ: ರಾಯಚೂರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಹಿಂದಿನ ಉಪನಿರ್ದೇಶಕ(ಆಡಳಿತ) ಹಾಗೂ ಹಾಲಿ ಬಾಗಲಕೋಟೆ ಜಿಲ್ಲಾ ಇಳಕಲ್ ಡಯಟ್ ಪ್ರಾಚಾರ್ಯ ಆಗಿರುವ ಬಿ.ಕೆ.ನಂದನೂರ ಅವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಸರ್ಕಾರ ಆದೇಶಿಸಿದ್ದು, ಕರ್ತವ್ಯದಿಂದ ಬಿಡುಗಡೆಗೊಳಿಸಿ ಧಾರವಾಡ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಜಯಶ್ರೀ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ನಂದನೂರ ಅವರು ರಾಯಚೂರ ಜಿಲ್ಲಾ ಡಿಡಿಪಿಐ ಆಗಿದ್ದ ವೇಳೆ ಸರ್ಕಾರದ ಸುತ್ತೋಲೆ ನಿಗದಿ ಪಡಿಸಿದ್ದ ಸೌಲಭ್ಯಗಳು ಇಲ್ಲದಿದ್ದರೂ ೧೪ ಶಾಲೆಗಳೂ ಸೇರಿದಂತೆ ಒಟ್ಟು ೪೧ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ನಂದನೂರ ಅವರ ಮೇಲಿನ ಆರೋಪದ ಬಗ್ಗೆ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಽÃಶರನ್ನು ವಿಚಾರಣಾಽಕಾರಿಯನ್ನಾಗಿ ನೇಮಿಸಲಾಗಿತ್ತು. ಅವರು ಸಲ್ಲಿಸಿದ ವರದಿಯಲ್ಲಿ ಸೌಲಭ್ಯ ಇಲ್ಲದೇ ಇರುವ ಶಾಲೆಗಳಿಗೂ ಅನುಮತಿ ನೀಡಿರುವುದು ಪತ್ತೆ ಮಾಡಿದ್ದರು. ಹೀಗಾಗಿ ಮೂಲ ಸೌಕರ್ಯಗಳೇ ಇಲ್ಲದಿರುವ ೪೧ ಶಾಲೆಗಳಿಗೆ ನಿಯಮಬಾಹಿರವಾಗಿ ಅನುಮತಿ ನೀಡಿರುವುದು ಕಂಡು ಬಂದಿದೆ.
ಅಽಕಾರಿಗಳ ತಂಡವೂ ೧೪ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿರುವುದನ್ನು ತೀರಸ್ಕರಿಸುವಂತೆ ವರದಿ ನೀಡಿದ್ದರೂ ಸಹ ಶಾಲಾ ಆಡಳಿತ ಮಂಡಳಿಗಳ ಮನವಿ ಪುರಸ್ಕರಿಸಿ ಶಾಲೆಗಳಿಗೆ ಅನುಮತಿ ನೀಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಕರಬುರಗಿ ಹೆಚ್ಚುವರಿ ಆಯುಕ್ತರ ಕಚೇರಿ ವರದಿ ನೀಡಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಇದೀಗ ಸರ್ಕಾರ ಮೇ ೮ ರಂದೇ ಬಿ.ಕೆ.ನಂದನೂರ ಅವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ, ಬಿಡುಗಡೆಗೊಳಿಸಿ ಧಾರವಾಡದ ಆಯುಕ್ತರಿಗೆ ಪತ್ರ ಕಳುಹಿಸಿದ್ದಾರೆ.
ಬಿ.ಕೆ.ನಂದನೂರ ಅವರು ಬಾಗಲಕೋಟೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದರು. ಹುದ್ದೆಯಿಂದ ವರ್ಗಾವಣೆ ಆದ ಬಳಿಕ ಸದ್ಯ ಇಳಕಲ್ ಡಯಟ್ ಪ್ರಾಚಾರ್ಯರಾಗಿದ್ದರು.