ಇಲೆಕ್ಟ್ರಾನಿಕ್ ಮಳಿಗೆಗೆ ಬೆಂಕಿ

fire 22222
Published on

ಮಂಗಳೂರು: ನಗರದ ಕಂಕನಾಡಿ ಬಳಿಯ ಇಲೆಕ್ಟ್ರಾನಿಕ್ ಮಳಿಗೆಯೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಕಂಕನಾಡಿ ಬಳಿ ಬಲ್ಮಠ ರಸ್ತೆಯ ಪ್ಯಾರಾಮೌಂಟ್ ವೆಸ್ಟ್‌ಗೇಟ್ ಕಟ್ಟಡದಲ್ಲಿರುವ ಎಲ್‌ಜಿ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೋಮವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಟಿವಿ, ಫ್ರಿಜ್, ಎಸಿ ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಹಾಗೂ ಹೊಗೆ ಗಮನಿಸಿದ ಪಕ್ಕದ ಹೋಟೆಲ್‌ನವರು ಅಗ್ನೀಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿಶಮನ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net