ಇಲವಾಲದಲ್ಲಿ ವಾಜಪೇಯಿ ಜನ್ಮ ದಿನಾಚರಣೆ

atal bihari vajapayee
Published on

ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿಯಾಗಿದ್ದರು. ತಮ್ಮ ರಾಜಕೀಯ ಚಿಂತನೆಗಳಿಗೆ ಯಾವಾಗಲೂ ಕಟಿಬದ್ಧರಾಗಿದ್ದರು ಎಂದು ಸ್ಥಳೀಯ ಮುಖಂಡ ಮಾರ್ಬಳ್ಳಿ ಮೂರ್ತಿ ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ಇಲವಾಲ ಗ್ರಾಮ ಪಂಚಾಯಿತಿ ಪೌರಕಾ ರ್ಮಿಕರು ಮತ್ತು ವಾಟರ್‌ಮನ್‌ಗಳಿಗೆ ಇಲವಾಲ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಲೋಕಸಭೆಗೆ 9 ಬಾರಿ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವ ದಾಖಲೆ ಅವರ ಹೆಸರಿನಲ್ಲಿದೆ ಎಂದು ಹೇಳಿದರು.

ಮುಖಂಡರಾದ ಬೋಗಾದಿ ನಂದೀಶ್, ಕುಮಾರ್ ಇಲವಾಲ, ವೇದಾಂತ್ ಕಡಕೋಳ, ನಾಗರಾಜ್ ಮೇಗಳಾಪುರ, ಮಲ್ಲಿಕಾರ್ಜುನ ಸ್ವಾಮಿ ಶೆಟ್ಟಿ ನಾಯಕನಹಳ್ಳಿ, ರವಿ ಇಲವಾಲ, ವೀರಭದ್ರ ದಡದಕಲ್ಲಹಳ್ಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net