ಹಳಕಟ್ಟಿ ಕಾರ್ಯ ಸ್ಮರಣೀಯ

ILAKALL RURAL 25 - 01
ಇಳಕಲ್ಲ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ ಇದ್ದರು.
Published on

ಇಳಕಲ್ಲ(ಗ್ರಾ): ಹನ್ನೆರಡನೇ ಶತಮಾನದಲ್ಲಿ ಶರಣರು ನವ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಇಳಕಲ್ಲ ಶ್ರೀಮಠ ಅಂಥ ಕಾರ್ಯವನ್ನು ಮುಂದುವರಿಸಿಕೊAಡು ಹೊರಟಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿನ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಮಗೆ ಮತ್ತು ತಂದೆ ಯಡಿಯೂರಪ್ಪ ಅವರಿಗೆ ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶರಣರ ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ಹಳಕಟ್ಟಿಯವರ ಪಾತ್ರ ದೊಡ್ಡದು. ಅವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನ ಎಂದು ಆಚರಿಸಲು ಸರ್ಕಾರ ಆದೇಶ ಮಾಡುವ ಜೊತೆಗೆ ವಚನ ಸಂಪುಟಗಳನ್ನು ಪ್ರಕಟಿಸಲು ಆಜ್ಞೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಮ್ಮ ತಂದೆಯವರ ಮೇಲೆ ವಿಶೇಷ ಕಾಳಜಿ ಪ್ರೇಮ ಇರುವುದನ್ನು ನಮ್ಮ ಪರಿವಾರ ಯಾವಾಗಲೂ ಸ್ಮರಿಸುತ್ತದೆ. ಇಲ್ಲಿ ನೀವು ನನಗೆ ತೋರಿಸುತ್ತಿರುವ ಪ್ರೀತಿಯನ್ನು ಕಂಡರೆ ಈ ಕ್ಷೇತ್ರದಲ್ಲಿ ದೊಡ್ಡನಗೌಡ ಪಾಟೀಲರ ಬದಲು ನಾನೇ ಚುನಾವಣೆಗೆ ನಿಲ್ಲಬೇಕಾಗುತ್ತದೆ ಏನೋ ಎಂದು ಚಟಾಕಿ ಹಾರಿಸಿದರು. ಮಹಿಳೆಯರು ತಮ್ಮ ಮನೆ ಮಗನಂತೆ ನನ್ನನ್ನು ನೋಡಿಕೊಳ್ಳುತ್ತಿರುವುದು ನನ್ನ ಸೌಭಾಗ್ಯ ಎಂದರು.

ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್. ಮದಭಾವಿ ಮಾತನಾಡಿ, ೩೪ ವಚನ ಸಂಪುಟಗಳನ್ನು ಪ್ರಕಟಿಸಲು ಯಡಿಯೂರಪ್ಪ ಆದೇಶ ಮಾಡಿ ಪುಣ್ಯ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಯಡಿಯೂರಪ್ಪ ಅವರು ತಮ್ಮ ಆಡಳಿತಾವಽಯಲ್ಲಿ ಫ.ಗು. ಹಳಕಟ್ಟಿ ಅವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನವಾಗಿ ಆಚರಿಸಲು ಆದೇಶ ಹೊರಡಿಸಿ ಇಡೀ ಶರಣಕುಲವನ್ನು ಗೌರವಿಸಿದ್ದಾರೆ. ಕರೊನಾದಿಂದಾಗಿ ೨ ವರ್ಷದ ನಂತರ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿದರು.
ಯುವ ನಾಯಕನ ಅದ್ದೂರಿ ಮೆರವಣಿಗೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ನಗರಕ್ಕೆ ಸ್ವಾಗತಿಸಲಾಯಿತು. ಫ.ಗು.ಹಳಕಟ್ಟಿಯವರ ೧೪೨ ನೇ ಜಯಂತಿ ಮತ್ತು ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಅವರನ್ನು ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಮೆರವಣಿಗೆ ನಡೆಸಲಾಯಿತು. ಅವರ ಸ್ವಾಗತ ಹಿನ್ನೆಲೆಯಲ್ಲಿ ಎಲ್ಲೆಡೆ ಕೇಸರಿ ಧ್ವಜಗಳು ಹಾರಾಡಿದ್ದರಿಂದ ನಗರ ಕೇಸರಿಮಯವಾಗಿತ್ತು.
ಹಲವಾರು ವಾದ್ಯಗೋಷ್ಠಿ, ಡೊಳ್ಳು ಕುಣಿತದೊಂದಿಗೆ ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭವಾಗಿ ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತಕ್ಕೆ ತಲುಪಿದಾಗ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಕಂಠಿಯವರ ಪುತ್ಥಳಿಗೆ ವಿಜಯೇಂದ್ರ ಮಾಲಾರ್ಪಣೆ ಮಾಡಿದರು. ಅಲ್ಲಿಂದ ತುಳಸಿ ಆಸ್ಪತ್ರೆ ಮಾರ್ಗವಾಗಿ ಮಹಾಂತೇಶ ಚಿತ್ರಮಂದಿರ, ಅಂಬಾ ಭವಾನಿ ದೇವಸ್ಥಾನ, ತರಕಾರಿ ಮಾರುಕಟ್ಟೆ ಮಾರ್ಗವಾಗಿ ಶ್ರೀಮಠಕ್ಕೆ ತೆರಳಿತು. ಅಲ್ಲಿ ವಿಜಯೇಂದ್ರ ಅವರು ಶ್ರೀಗಳ ದರ್ಶನ ಪಡೆದರು. ಅಲ್ಲಿಂದ ಗಾಂಽ ಚೌಕ, ಗ್ರಾಮ ಚಾವಡಿ ಮಾರ್ಗವಾಗಿ ವಿಜಯ ಮಹಾಂತೇಶ ಅನುಭವ ಮಂಟಪಕ್ಕೆ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net