ಇಬ್ರಾಹಿಂ ಹೇಳಿಕೆಯನ್ನು ಸ್ವಾಗತಿಸಿದ ಸಚಿವ

zamir
Published on

ಚಿತ್ರದುರ್ಗ:‘ಇಂಡಿಯಾ’ಒಕ್ಕೂಟಕ್ಕೆ ಬೆಂಬಲಿಸುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಇಂಡಿಯಾ’ ಎನ್ನುವ ಬದಲು ಎನ್‌ಡಿಎ ಎಂದಿರುವ ಜೆಡಿಎಸ್ ಪಕ್ಷದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ.
ಅಧಿಕಾರದಲ್ಲಿದ್ದಾಗ ಅವರಿಗೆ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ ಎಂದು ಸಿಎಂ ಎಂದರೆ ಕಲೆಕ್ಷನ್‌ಮಾಸ್ಟರ್ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು. ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತಂದಿರುವುದನ್ನು ನೋಡಿ ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ,ಶೋಕಿ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net