ಇಬ್ಬೀಡು ಗ್ರಾಪಂಗೆ ನವೀನ ಅಣ್ಣಪ್ಪ ಅಧ್ಯಕ್ಷ

22blrp1
Published on

ಬೇಲೂರು: ತಾಲೂಕಿನ ಮಾದಿಹಳ್ಳಿ ಹೋಬಳಿ ಇಬ್ಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ ಅಣ್ಣಪ್ಪ ಆಯ್ಕೆಯಾದರು.

ಮಂಜುಳಾ ಮಂಜುನಾಥ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನವೀನ ಅಣ್ಣಪ್ಪ ಹಾಗೂ ಮಮತಾ ನಾಮಪತ್ರ ಸಲ್ಲಿಸಿದ್ದರು. ಇಬ್ಬೀಡು ಗ್ರಾಪಂ 14 ಜನ ಸದಸ್ಯರ ಪೈಕಿ ಒಬ್ಬರು ಗೈರಾಗಿದ್ದರು. ನಾಮಪತ್ರ ಯಾರೂ ವಾಪಸ್ ಪಡೆಯದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನವೀನ ಅಣ್ಣಪ್ಪ 10 ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ ಮಮತಾ 3 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಕಾರ್ಯನಿರ್ವಹಿಸಿದರು.

ಇಬ್ಬೀಡು ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಬಾಲಚಂದ್ರು, ಐ.ಜಿ.ಲೋಕೇಶ್, ಜಯಣ್ಣ, ಆನಂದ್, ಸಚಿನ್, ಈರಪ್ಪ, ನಾಗಮಣಿ, ಮಂಜುಳಾ, ಶಾರದಮ್ಮ, ಮಮತಾ, ಸುಮಿತ್ರಮ್ಮ, ಮುಖಂಡ ಅಣ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net