ಇಬ್ಬರು ಸಾಧಕರಿಗೆ ಕಸಾಪ ದತ್ತಿ ಪ್ರಶಸ್ತಿ

New Project (31)
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ 2024 ಮತ್ತು 2025ನೇ ಸಾಲಿನ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿಗೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಚ್. ಶಕುಂತಲಾ ಭಟ್ ಮತ್ತು ತುಮಕೂರು ಜಿಲ್ಲೆಯ ಸುದ್ದೇಗುಂಟೆಯ ವಿಜಯಾ ಮೋಹನ್ ಆಯ್ಕೆಯಾಗಿದ್ದಾರೆ. ಶಕುಂತಲಾ ಭಟ್ ಅವರು ಸಂಘಟನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದವರು. ‘ಹಾರುವ ಚೆಂಡು’, ‘ಚಿಣಿಮಿಣಿ’, ‘ಹಬ್ಬ’, ‘ಮಿಠಾಯಿ’ ಅವರ ಪ್ರಮುಖ ಕಥಾ ಸಂಕಲನಗಳು. ತುಳು ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ಅಂಗವಿಕಲೆಯಾಗಿರುವ ವಿಜಯಾ ಮೋಹನ್, ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆಯಲ್ಲಿದ್ದು, ‘ತಬ್ಬಲಿ ಸಾರು’, ‘ಜಾತಿ’, ‘ವೋಟು’, ‘ಮೇವು’ ಕಥಾ ಸಂಕಲನ ಹಾಗೂ ‘ನೀರು’ ಕಾದಂಬರಿ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net