

ಹನೂರು: ತಾಲೂಕಿನ ಅಂಬಿಕಾಪುರ ಗ್ರಾಮದ ಬಳಿ ಶುಕ್ರವಾರ ನಾಯಿ ಅಡ್ಡ ಬಂದ ಪರಿಣಾಮ ಆಯತಪ್ಪಿ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿರುವ ಬೆನ್ನಲ್ಲೇ ಶನಿವಾರ ಸಂಜೆ ಹನೂರಿನ ಹೊರವಲಯದಲ್ಲಿ ಇಬ್ಬರು ಸವಾರರು ಗಾಯಗೊಂಡಿದ್ದಾರೆ.
ತಾಲೂಕಿನ ಎಲ್ಲೇಮಾಳ ಗ್ರಾಮದ ರಂಗರಾಜು ಹಾಗೂ ಮುರುಗೇಶ್ ಗಾಯಗೊಂಡವರು. ಈ ಇಬ್ಬರೂ ಸಂಜೆ 7ಗಂಟೆ ವೇಳೆಯಲ್ಲಿ ಕಾರ್ಯನಿಮಿತ್ತ ಗ್ರಾಮದಿಂದ ಹನೂರಿಗೆ ಬೈಕ್‌ನಲ್ಲಿ ತೆರತ್ತಿದ್ದರು. ಈ ವೇಳೆ ಪಟ್ಟಣದ ಹೊರ ವಲಯದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಿಸಲಾಗದೆ ಬೈಕ್ ನೆಲಕ್ಕುರಳಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ತಿಳಿಸಲಾಗಿ, ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.