ಇಬ್ಬರು ಸರಗಳ್ಳರ ಸೆರೆ

IMG-20220902-WA0055.jpg
Published on

ದಾವಣಗೆರೆ: ಇಬ್ಬರು ಸರಗಳ್ಳರನ್ನು ಗುರುವಾರ ಬಂಧಿಸಿರುವ ಬಿಳಿಚೋಡು ಠಾಣೆ ಪೊಲೀಸರು, 2 ಲಕ್ಷ ರೂ.‌ಮೌಲ್ಯದ 5೦ ಗ್ರಾಂ.ನ ತಾಳಿಸರ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ತಾಲೂಕಿನ ಮಂಜುನಾಥ ಹಾಗೂ ಮನೋಜ್ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿಗೆ ಶೋಧ ನಡೆದಿದೆ.

ಹೊಂಡಾ ಆಕ್ಟೀವಾದಲ್ಲಿ ಜಗಳೂರು-ದಾವಣಗೆರೆ ರಸ್ತೆಯಲ್ಲಿ ಆ. 25 ರಂದು ಬಿಳಿಚೋಡು ಕಡೆಗೆ ಬರುತ್ತಿದ್ದ ದಂಪತಿಯನ್ನು, ಪಲ್ಸರ್ ಮೋಟಾರ್ ಬೈಕಿನಲ್ಲಿ ಬಂದ ಆರೋಪಿಗಳು ಹಿಂಬಾಲಿಸಿಕೊಂಡು ಬಂದು ತಾಳಿ ಸರ ಕಿತ್ತುಕೊಂಡು ಹೋಗಿದ್ದರು. ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದ ಸುಷ್ಮಾ ಬಿ.ಎಸ್. ದೂರು ಸಲ್ಲಿಸಿದ್ದರು.

ದಾವಣಗೆರೆ ಗ್ರಾಮಾಂತರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಬಿಳಿಚೋಡು ಠಾಣೆಯ ಪಿಐ ಸತ್ಯನಾರಾಯಣಸ್ವಾಮಿ ಕೆ., ಪಿಎಸ್‌ಐ ಓಂಕಾರನಾಯ್ಕ್ ಕೆ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net