

ಮಳವಳ್ಳಿ:ಪೊಲೀಸ್ ಪೇದೆಯೊಬ್ಬರ ಬೈಕ್ ಸೇರಿದಂತೆ ತಾಲೂಕಿನ ವಿವಿಧೆಡೆ ವಾಹನಗಳನ್ನು ಕಳುವು ಮಾಡಿ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನೇತೃತ್ವದ ತನಿಖಾ ತಂಡ ಇತ್ತೀಚೆಗೆ ಬಂಧಿಸಿದೆ.
ತಾಲೂಕಿಮ ಕಿರುಗಾವಲು ಗ್ರಾಮದ ಅಬ್ದುಲ್ ಮಸೂದ್, ರಶೀದ್ ಖಾನ್ ಬಂಧಿತ ಆರೋಪಿಗಳು. ಇವರಿಬ್ಬರೂ ಸೇರಿ ಕಿರುಗಾವಲು ಪೊಲೀಸ್ ಠಾಣೆಯ ಪೇದೆಗೆ ಸೇರಿದ ಬೈಕ್ ಅನ್ನು ಕಳೆದ ಏಳು ತಿಂಗಳ ಹಿಂದೆ ಕಳುವು ಮಾಡಿದ್ದರು. ಅಲ್ಲದೇ ಇತರೆಡೆ ಎರಡು ಬೈಕ್ ಹಾಗೂ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಟೋವನ್ನು ಕಳ್ಳತನ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಧರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಹನುಮಂತ್ ಕುಮಾರ್, ಸತೀಶ್, ಪೇದೆಗಳಾದ ಮಹೇಶ, ಶ್ರೀನಿವಾಸ ಅವರ ತಂಡ ರಚನೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.