ಇಬ್ಬರು ಯುವಕರು ಭೀಮೆ ನದಿಪಾಲು

27 ydg 03
Published on

ಯಾದಗಿರಿ: ವಡಗೇರಾ ತಾಲೂಕಿನ ಮಾಚನೂರ ಗ್ರಾಮದ ಇಬ್ಬರು ಯುವಕರು ಭೀಮಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಕೊಚ್ಚಿಕೊಂಡು ಹೋಗಿದ್ದಾರೆ.

ದನ ಕಾಯಲು ಹೋಗಿದ್ದ ರಮೇಶ(೧೭) ಮತ್ತು ಸಿದ್ದಪ್ಪ (೨೦) ನದಿಗಿಳಿದಾಗ ರಭಸದಿಂದ ಹರಿಯುವ ನೀರಿನಲ್ಲಿ ಕೊಚ್ಚಿ ಹೋದವರು. ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಸಂಜೆ ೬.೩೦ರವರೆಗೆ ಶವಗಳು ದೊರೆತಿಲ್ಲ.

ಜೀವನಕ್ಕೆ ಆಶ್ರಯವಾಗಿದ್ದ ಮೊಮ್ಮಗ ರಮೇಶ ನದಿಪಾಲಾದ ವಿಷಯ ತಿಳಿದ ಅಜ್ಜ ಸಿದ್ದಪ್ಪ ನದಿ ನೀರಿಗೆ ಹಾರಲು ಮುಂದಾದಾಗ ಸ್ಥಳೀಯರು ಮತ್ತು ಶ್ರೀಶೈಲ್ ಎಂಬ ಯುವಕ ತಡೆದು ರಕ್ಷಿಸಿದ್ದಾರೆ ಎನ್ನಲಾಗಿದೆ. ನೀರುಪಾಲಾದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಹಾರಾಷ್ಟçದ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ವಡಗೇರಾ ತಾಲೂಕಿನ ಗುರುಸುಣಗಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಶುಕ್ರವಾರ ಅಪಾಯಮಟ್ಟ ಮೀರಿ ಹರಿಯುತ್ತಿರುವ ನೀರಿನಲ್ಲಿ ಮೊಸಳೆಗಳು ಎಲ್ಲೆಂದರಲ್ಲಿ ತೇಲಿ ಬರುತ್ತಿರುವುದು ಹುಡುಕಾಟಕ್ಕೆ ಅಡಚಣೆಯಾಗಿದೆ. ಶೋಧ ಕಾರ್ಯ ಚುರುಕುಗೊಳಿಸಲು ಇನ್ನಷ್ಟು ಸಿಬ್ಬಂದಿ ಮತ್ತು ನುರಿತ ಈಜುಗಾರರನ್ನು ಕರೆಸುವುದಾಗಿ ಸ್ಥಳದಲ್ಲೇ ಬೀಡುಬಿಟ್ಟಿರುವ ತಹಸೀಲ್ದಾರ್ ಮಂಗಳಾ ಎಂ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net