

ಮಾರ್ಕೇಟ್ ಠಾಣೆ ಪೊಲೀಸ್‌ರ ಕಾರ್ಯಾಚರಣೆ
ಬೆಳಗಾವಿ: ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಆರು ಬೈಕ್‌ಗಳನ್ನು ಗುರುವಾರ ಮಾರ್ಕೇಟ್ ಠಾಣೆಯ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತರನ್ನು ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪ ಬೇವಿನಕೊಪ್ಪ ಹಾಗೂ ಬೆಳಗಾವಿ ಶ್ರೀಗಾರ್ಡನ್ ಬಳಿ ವಾಸವಾಗಿರುವ ಅಬುಬೂಕರ್ ಸಿಕಂದರ್ ಸವದಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಹಿರೋ ಹೊಂಡಾ ಸ್ಪೇಲೆಂಡರ್-3, ಸಿಡಿ ಡಿಲಕ್ಸ್-1, ಆಕ್ಟೀವ್ ಹೊಂಡಾ-1 ಹಾಗೂ ಹಿರೋ ಮೆಸ್ಟ್ರೋ ಸೇರಿ 2.40 ಲಕ್ಷ ರೂ.ಮೌಲ್ಯದ ಆರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಮಾರ್ಕೇಟ್ ಉಪವಿಭಾಗದ ಎಸಿಪಿ ಎನ್.ವಿ.ಬರಮಾನಿ ಮಾರ್ಗದರ್ಶನದಲ್ಲಿ ಇನ್ಸೆಪೆಕ್ಟರ್ ಮಹಾಂತೇಶ ದಾಮಣ್ಣವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಬೆಳಗಾವಿ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.