ಇಬ್ಬರು ಚಾಲಕರಿಗೆ ಶಿಕ್ಷೆ, ದಂಡ

accident
Published on

ಅಥಣಿ ಗ್ರಾಮೀಣ: ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚಾಲಕರಿಗೆ ಅಥಣಿ ಸಿ.ಜೆ. ಮತ್ತು ಜೆ.ಎಂ.ಎಫ್​.ಸಿ. ನ್ಯಾಯಾಧೀಶ ಓಂಕಾರಮೂರ್ತಿ ಎಚ್​. ಅವರು 1 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಅಂಕಲಗಿ ಗ್ರಾಮದ ಯಲ್ಲಪ್ಪ ಗಂಗನ್ನಹಳ್ಳಿ ಹಾಗೂ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸಂಗಪ್ಪ ಬಿರಾದಾರ ಶಿೆಗೊಳಗಾದ ಚಾಲಕರು.

2014 ಮಾರ್ಚ್​ 7ರಂದು ಚಾಲಕ ಸಂಗಪ್ಪ ಬಿರಾದಾರ ಕಕಮರಿಯಿಂದ ಕೋಹಳ್ಳಿ ಕಡೆಗೆ ಅತಿವೇಗವಾಗಿ ಕ್ರೂಸರ್​ ವಾಹನ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಅಶ್ವಿನಿಗೆ ಹಾಯಿಸಿ ಮರಣಪಡಿಸಿದ್ದ. 2019 ನವೆಂಬರ್​ 7ರಂದು ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಬಳಿ ಬೈಕ್​ ಹಿಂಬದಿಗೆ ಚಾಲಕ ಯಲ್ಲಪ್ಪ ಗಂಗನ್ನಹಳ್ಳಿ ಸಾರಿಗೆ ಸಂಸ್ಥೆ ಬಸ್​ ಡಿಕ್ಕಿ ಹೊಡಿಸಿದ್ದರಿಂದ ಅಥಣಿ ಪಟ್ಟಣದ ಚಂದ್ರಶೇಖರ ಮುರಗೆಪ್ಪ ತಂಗಡಿ ಸ್ಥಳದಲ್ಲೇ ಮೃತಪಟ್ಟಿದ್ದ.

ಈ ಎರಡೂ ಪ್ರಕರಣ ಐಗಳಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದವು. ಅಂದಿನ ತನಿಖಾಧಿಕಾರಿ ಸಿಪಿಐ ಎಸ್​.ಎಚ್​. ಸುಬೇದಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸನತಕುಮಾರ ಖೇಮಲಾಪೂರೆ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net