ಇಬ್ಬರು ಕೊಲೆ ಆರೋಪಿಗಳು ವಶಕ್ಕೆ

Arrest
Published on

ಕಬ್ಬೂರ: ಪಟ್ಟಣದ ಬೆಲ್ಲದ- ಬಾಗೇವಾಡಿ ರಸ್ತೆ ಪಕ್ಕದಲ್ಲಿ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ.ಗ್ರಾಮದ ವಾಸು ಅರ್ಜುನ ಮಾಳಿಂಗೆ, ಸಿದ್ದಪ್ಪ ಲಗಮಪ್ಪ ಮಾಳಿಂಗೆ ಬಂಧಿತರು.

ಅದೇ ಗ್ರಾಮದ ಬೀಮಣ್ಣ ಕಲ್ಲಪ್ಪ ಮುನ್ನೋಳಿ(51) ಕೊಲೆಗೀಡಾದವ. ಜು.5ರಂದು ಕೊಲೆ ನಡೆದಿತ್ತು. ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐ ಬಸನಗೌಡ ನೇರ್ಲಿ ನೇತೃತ್ವದಲ್ಲಿ ಜು.14ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net