ಇಬ್ಬರು ಕಳ್ಳರ ಬಂಧನ, 6 ಬೈಕ್ ವಶ

IMG-20230730-WA0035.jpg
Published on

ದಾವಣಗೆರೆ: ಬೈಕ್ ಕಳ್ಳರಿಬ್ಬರನ್ನು ಬಂಧಿಸಿರುವ ದಾವಣಗೆರೆ ಪೊಲೀಸರು 2.80 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಲಶೆಟ್ಟಿಹಳ್ಳಿಯ ಆಟೋ ಚಾಲಕ ರಾಘವೇಂದ್ರ ಎಸ್. ಆಲಿಯಾಸ್ ರಾಜಾಹುಲಿ ಆಲಿಯಾಸ್ ರಘು ಹಾಗೂ ಶಾಮನೂರಿನ ವಿ.ಪ್ರಮೋದ್ ಬಂಧಿತರು.

ಆರೋಪಿಗಳು ದಾವಣಗೆರೆಯ ವಿದ್ಯಾನಗರ, ಬಡಾವಣೆ ಮಾಯಕೊಂಡ, ರಾಣೆಬೆನ್ನೂರು ಹಾಗೂ ದಾವಣಗೆರೆ ಬಡಾವಣೆ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದು, ಹದಡಿ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪ್ರಭಾರ ತನಿಖಾಧಿಕಾರಿ, ಪ್ರೊಬೆಷನರಿ ಡಿವೈಎಸ್ಪಿ ಯಶವಂತಕುಮಾರ್, ವಿದ್ಯಾನಗರ ಠಾಣೆ ಪಿಐ ಪ್ರಭಾವತಿ ಸಿ. ಶೇತಸನದಿ, ಜಿ.ಎಂ.ರೇಣುಕಾ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net